Webdunia - Bharat's app for daily news and videos

Install App

ಜೂನಿಯರ್‌ ಎನ್‌ಟಿಆರ್‌ಗೆ ಜೋಡಿಯಾಗಲಿದ್ದಾರೆ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

sampriya
ಶುಕ್ರವಾರ, 24 ಮೇ 2024 (16:37 IST)
Photo By Instagram
ಹೈದರಾಬಾದ್: ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂಬರುವ  ಜೂನಿಯರ್ ಎನ್‌ಟಿಆರ್ ಜತೆಗಿನ ಚಿತ್ರದಲ್ಲಿ ನಾಯಕಿಯನ್ನಾಗಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದ್ದಾರೆಂಬ ಸುದ್ದಿಯಿದೆ.

ತಾತ್ಕಾಲಿಕವಾಗಿ ಚಿತ್ರಕ್ಕೆ ಎನ್‌ಟಿಆರ್ 31 ಎಂದು ಶೀರ್ಷಿಕೆ ಇಡಲಾಗಿದ್ದು, ಮೇ 24 ರಂದು ಜೂನಿಯರ್ ಎನ್‌ಟಿಆರ್ ಅವರ 41 ನೇ ಹುಟ್ಟುಹಬ್ಬದಂದು, ಆಗಸ್ಟ್‌ನಲ್ಲಿ ಚಿತ್ರವು ತೆರೆಗೆ ಬರಲಿದೆ ಎಂದು ತಯಾರಕರು ಘೋಷಿಸಿದರು. 

ಈ ಸುದ್ದಿ ನಿಜವಾದರೆ ಮೊದಲ ಬಾರಿ ರಶ್ಮಿಕಾ ಹಾಗೂ ಜೂನಿಯರ್‌ ಎನ್‌ಟಿಆರ್‌ ಅವರು ಜೋಡಿಯಾಗಿ ತೆರೆ ಹಂಚಿಕೊಳ್ಳಲಿದ್ದಾರೆ.

ಇನ್ನೂ ಸಿಕ್ಕಿರುವ ಮಾಹಿತಿ ಪ್ರಕಾರ ಸಿನಿಮಾ ನಿರ್ಮಾಪಕರು ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅವರನ್ನು ಚಿತ್ರಕ್ಕಾಗಿ ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ ಮತ್ತು ಈಗಾಗಲೇ ಅವರೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದ್ದಾರೆ ಎನ್ನುವ ಮಾಹಿತಿಯಿದೆ.

ರಶ್ಮಿಕಾ ಅವರು ಈಚೆಗೆ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಜತೆಗೆ ರಿಲೀಸ್‌ ಆಗಿರುವ ಅನಿಮಲ್‌ ಸಿನಿಮಾ ಇವರಿಗೆ ತುಂಬಾನೇ ಖ್ಯಾತಿಯನ್ನು ತಂದುಕೊಟ್ಟಿತು. ಇದೀಗ ಅವರು ಬಹುನಿರೀಕ್ಷಿತ ಪುಷ್ಪ 2:  ದಿ ರೂಲ್‌ನಲ್ಲಿ ಅಲ್ಲು ಅರ್ಜುನ್ ಜೊತೆಗೆ ನಟಿಸುತ್ತಿದ್ದಾರೆ.

ಮುಂಬರುವ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವು ಡ್ರ್ಯಾಗನ್ ಎಂದು ಹೆಸರಿಸಲಾಗಿದೆ, ಇದನ್ನು ಟಾಲಿವುಡ್‌ನ ಉನ್ನತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಲಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅದು ಮುಗಿದ ಅಧ್ಯಾಯ: ಕುಡ್ಲದ ಬೆಡಗಿ ಶಮಿತಾ ಶೆಟ್ಟಿ ಲವ್ ಬ್ರೇಕಪ್ ಬಗ್ಗೆ ಮುಕ್ತ ಮಾತು

ವಿಷ್ಣುವರ್ಧನ್ ಸ್ಮಾರಕ ನೆಲಸಮ ಬೆನ್ನಲ್ಲೇ ಸಿಎಂ ಭೇಟಿಯಾದ ನಟ ಅನಿರುದ್ಧ್‌, ಯಾಕೆ ಗೊತ್ತಾ

ಮುಂಬೈನ ಪ್ರಸಿದ್ಧ ಲಾಲ್‌ಬೌಚಾ ರಾಜಾ ಪಾಂಡಲ್‌ಗೆ ನಟ ಸಿದ್ಧಾರ್ಥ್‌, ಜಾನ್ವಿ ಕಪೂರ್ ಭೇಟಿ

ಅನುಶ್ರೀ ಗಂಡ ನಿಜಕ್ಕೂ ಕೋಟ್ಯಾಧಿಪತಿನಾ, ಮದುವೆ ಬಳಿಕ ಬಯಲಾಯ್ತು ಸತ್ಯ

ಆಂಕರ್ ಅನುಶ್ರಿ ಮದುವೆ ಫೋಟೋಗಳು ಇಲ್ಲಿವೆ

ಮುಂದಿನ ಸುದ್ದಿ
Show comments