ನರೇಶ್ ಗೆ ಎನರ್ಜಿ 10 ಜನರ ಎನರ್ಜಿ ಇದೆ, ರಾತ್ರಿ ನಾನೇ ಸುಸ್ತಾಗುತ್ತಾನೆ: ಪವಿತ್ರಾ ಲೋಕೇಶ್ Video

Krishnaveni K
ಮಂಗಳವಾರ, 21 ಜನವರಿ 2025 (12:53 IST)
ಬೆಂಗಳೂರು: ಟಾಲಿವುಡ್ ಜೋಡಿ ನರೇಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಪವಿತ್ರಾ ಲೋಕೇಶ್ ನೀಡಿದ ಹೇಳಿಕೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದೆ.

ನರೇಶ್ ನಿನ್ನೆ 65 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಅವರು ಮಾಧ್ಯಮಗೋಷ್ಠಿಯಲ್ಲಿ ಪತ್ನಿ ಪವಿತ್ರಾ ಜೊತೆ ಬಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಗೂ ಪವಿತ್ರಾ ಉಡುಗೊರೆಯಾಗಿ ನೀಡಿದ್ದ ಟಿ ಶರ್ಟ್ ನ್ನೇ ನರೇಶ್ ಧರಿಸಿದ್ದರೆ, ನರೇಶ್ ಉಡುಗೊರೆಯಾಗಿ ನೀಡಿದ್ದ ಸೀರೆಯನ್ನೇ ಪವಿತ್ರಾ ಉಟ್ಟುಕೊಂಡು ಬಂದಿದ್ದರು. ಈ ವೇಳೆ ನರೇಶ್ ಎನರ್ಜಿ ಬಗ್ಗೆ ಪವಿತ್ರಾ ಮಾತನಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಕೆಲಸದ ವಿಚಾರ ಬಂದರೆ ನರೇಶ್ ಗೆ 10 ಜನರಿಗಿರುವ ಎನರ್ಜಿ ಇದೆ. ನಾವು ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ದಿನ ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ರಾತ್ರಿ ನನಗೆ ಸುಸ್ತಾಗುತ್ತದೆ. ಆದರೆ ಇನ್ನುಳಿದ ಕೆಲಸವನ್ನು ನೀವೇ ಮಾಡಿ ಎಂದರೂ ಅವರಿಗೆ ಸುಸ್ತಾಗುವುದಿಲ್ಲ. ಕೆಲಸದ ವಿಚಾರದಲ್ಲಿ ನರೇಶ್ ನಷ್ಟು ಚೈತನ್ಯ ನಮ್ಮಲ್ಲಿಲ್ಲ’ ಎಂದು ಪವಿತ್ರಾ ಹೇಳಿದ್ದಾರೆ.

ಪವಿತ್ರಾ ಕೆಲಸದ ವಿಚಾರವಾಗಿ ಈ ಹೇಳಿಕೆ ನೀಡಿದ್ದರೂ ನೆಟ್ಟಿಗರು ಇದೇ ವಿಡಿಯೋವನ್ನಿಟ್ಟುಕೊಂಡು ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments