Webdunia - Bharat's app for daily news and videos

Install App

ನಮ್ಮ ಊರಿನ ರಸಿಕರು ವೆಬ್ ಸೀರೀಸ್: ಎಲ್ಲಿ, ಹೇಗೆ ವೀಕ್ಷಿಸಬೇಕು?

Webdunia
ಗುರುವಾರ, 23 ಡಿಸೆಂಬರ್ 2021 (09:28 IST)
ಬೆಂಗಳೂರು: ಹಿಂದಿ, ಇಂಗ್ಲಿಷ್ ವೆಬ್ ಸೀರೀಸ್ ಗಳು ಜನಪ್ರಿಯವಾಗುತ್ತಿರುವ ಹೊತ್ತಲ್ಲೇ ಕನ್ನಡದಲ್ಲೂ ಅಂತಹದ್ದೇ ಒಂದು ಪ್ರಯತ್ನ ನಡೆದಿದೆ. ಗೊರೂರು ರಾಮಸ್ವಾಮಿ ಐಯಂಗಾರ್ ರ ನಮ್ಮೂರಿನ ರಸಿಕರು ಕೃತಿ ಆಧಾರಿತ ವೆಬ್ ಸರಣಿಯೊಂದು ನಿರ್ಮಾಣವಾಗಿದೆ.

ಕಟ್ಟೆ ಆಪ್ ಎಂಬ ಹೊಸದಾಗಿ ಲಾಂಚ್ ಆಗಿರುವ ಆಪ್ ವೆಬ್ ಸರಣಿಯನ್ನು ಹೊರತರುತ್ತಿದೆ. ಗೂಗಲ್ ಪ್ಲೇಸ್ಟೋರ್ ನಲ್ಲಿ ಕಟ್ಟೆ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು ವೆಬ್ ಸೀರೀಸ್ ವೀಕ್ಷಿಸಬಹುದು. ಒಟ್ಟು ಎಂಟು ಭಾಗಗಳ ಸರಣಿ ಸದ್ಯಕ್ಕೆ ಪ್ರಸಾರವಾಗಲಿದೆ. ವೀಕ್ಷಕರ ಅಭಿಪ್ರಾಯ ನೋಡಿಕೊಂಡು ಮುಂದಿನ ಭಾಗಗಳನ್ನು ನಿರ್ಮಾಣ ಮಾಡುವ ಯೋಜನೆ ಈ ಚಿತ್ರತಂಡಕ್ಕಿದೆ.

ಮಲೆನಾಡಿನ ಸುಂದರ ತಾಣಗಳು ನಮ್ಮ ಕಣ್ಣಿಗೆ ತಂಪು ನೀಡುತ್ತವೆ. ಜೊತೆಗೆ ಬಿ. ಸುರೇಶ್, ಮಂಡ್ಯ ರಮೇಶ್, ರಮೇಶ್ ಪಂಡಿತ್, ಲಕ್ಷ್ಮೀ ಗೋಪಾಲಸ್ವಾಮಿ, ರಾಜೇಶ್ ನಟರಂಗ, ರವಿಕುಮಾರ್ ಮುಂತಾದ ಘಟಾನುಘಟಿಗಳ ತಾರಾಗಣವಿದೆ. ಇವರೆಲ್ಲರ ಮನೋಜ್ಞ ಅಭಿನಯವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಳ್ಳಿಯಲ್ಲಿ ನಡೆಯುವ ರಾಜಕೀಯ, ಪ್ರೀತಿ-ಪ್ರೇಮ, ಜಾತಿ, ಮೇಲು-ಕೀಳು ಭಾವನೆಗಳ ತೊಳಲಾಟದ ಕತೆ ಇದರಲ್ಲಿದೆ. ತಿಳಿ ಹಾಸ್ಯದ ಮುಖಾಂತರ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ನಮ್ಮ ಊರಿನ ರಸಿಕರು ವೆಬ್ ಸರಣಿ ನೋಡುಗರಿಗೆ ಇಷ್ಟವಾಗಬಹುದು. ರಂಗಭೂಮಿ ಹಿನ್ನಲೆಯಿಂದ ಬಂದ ನಂದಿತಾ ಯಾದವ್ ನಿರ್ದೇಶನ ಮಾಡಿದ್ದು, ಅಶೋಕ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರಕತೆ, ಸಂಭಾಷಣೆ ರವಿಕುಮಾರ್ ನಿರ್ವಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments