ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ದಂಪತಿ ಕೆಲ ತಿಂಗಳ ಹಿಂದೆ ಗಂಡು ಮಗುವನ್ನು ಸ್ವಾಗತಿಸಿದ್ದರು. ಇದೀಗ ದಿವಂಗತ ಅಂಬರೀಶ್ ಮನೆಯಲ್ಲಿ ಮೊಮ್ಮಗನ ನಾಮಕರಣಕ್ಕೆ ಭಾರೀ ಸಿದ್ದತೆ ನಡೆಯುತ್ತಿದೆ.
ಇನ್ನೂ ಅಂಬರೀಶ್ ಅವರಿಗೆ ನಟ ಯಶ್ ಹಾಗೂ ರಾಧಿಕಾ ದಂಪತಿ ಮೇಲೆ ವಿಶೇಷ ಪ್ರೀತಿ. ಇವರಿಬ್ಬರ ಎಂಗೇಜ್‌ಮೆಂಟ್‌ನಿಂದ ಹಿಡಿದು ಎಲ್ಲ ಸಮಾರಂಭಗಳಲ್ಲೂ ಅವರು ಭಾಗಿಯಾಗುತ್ತಿದ್ದರು. ಇನ್ನೂ ಯಶ್‌ಗೆ ಹೆಣ್ಣು ಮಗುವಾದಾಗ ಅಂಬರೀಶ್ ಅವರು ಗಿಫ್ಟ್ ಆಗಿ ತೊಟ್ಟಿಲು ನೀಡಿದ್ದರು.
ಅದೇ ತೊಟ್ಟಿಲನ್ನೂ ತಮ್ಮ ಮೊಮ್ಮಕ್ಕಳಿಗೂ ಬಳಸಬೇಕೆಂದು ಅಂಬರೀಶ್ ಅವರು ಯಶ್ ಬಳಿ ಹೇಳಿದ್ದರಂತೆ. ಹೀಗಾಗಿ ಅಂಬಿ ಮೊಮ್ಮಗನಿಗೂ ಕಲಘಟಗಿ ತೊಟ್ಟಿಲು ರೆಡಿಯಾಗಿ ಬಂದಿದೆ. ಇದೇ 14ರಂದು ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ಮೊಮ್ಮಗನಿಗೆ ಅದ್ಧೂರಿಯಾಗಿ ನಾಮಕರಣ ನಡೆಸಲು ಸಿದ್ದತೆ ನಡೆಸಲಾಗಿದೆ.
ಅಂಬರೀಶ್ ಆಸೆಯನ್ನು ರಾಕಿಂಗ್ ಸ್ಟಾರ್ ಯಶ್, ಅಂಬಿ ಮೊಮ್ಮಗನಿಗೆ ಅಂಬಿ ಕೊಡಿಸಿದ್ದ ತೊಟ್ಟಿಲು ಕೊಟ್ಟಿದ್ದಾರೆ. ಅದರಂತೆ ಅಂಬಿ ಮನೆಗೆ ಅಪರೂಪದ ಉಡುಗೊರೆ ಈಗ ಅಭಿಷೇಕ್ ಮನೆಗೆ ಬರಲಿದೆ. ತಾತ ಕೊಟ್ಟ ತೊಟ್ಟಿಲನ್ನ ಮೊಮ್ಮಗನಿಗೆ ಉಡುಗೊರೆ ಆಗಿ ನೀಡಿದ್ದಾರೆ ಯಶ್.