Webdunia - Bharat's app for daily news and videos

Install App

ಸಮಂತಾಳಿಂದ ದೂರವಾದ ಮಗ ನಾಗಚೈತನ್ಯಗೆ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಸಿದ ನಾಗರ್ಜುನ

Sampriya
ಗುರುವಾರ, 8 ಆಗಸ್ಟ್ 2024 (14:26 IST)
Photo Courtesy X
2021ರಲ್ಲಿ ನಟಿ ಸಮಂತಾಗೆ ಡಿವೋರ್ಸ್‌ ನೀಡಿದ್ದ ನಟ ನಾಗಚೈತನ್ಯ ಅವರು ಇದೀಗ ತಮ್ಮ ಗೆಳತಿ ಶೋಭಿತಾ ಧೂಳಿಪಾಲ ಜತೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಟಿ ಸಮಂತಾಗೆ ವಿಚ್ಛೇಧನ ನೀಡಿದ ಬಳಿಕ ನಾಗಚೈತನ್ಯ ಹಾಗೂ ಶೋಭಿತಾ ಅವರು ಪ್ರೀತಿಯಲ್ಲಿದ್ದಾರೆಂಬ ಸುದ್ದಿ ಆಗಾಗ ಹರಿದಾಡುತ್ತಿತ್ತು. ಅದಲ್ಲದೆ ಟ್ರಿಫ್‌ಗೆ ಹೋಗುವಾಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದರಿಂದ ಸಾಮಾಜಿ ಜಾಲತಾಣದಲ್ಲಿ ನೆಟ್ಟಿಗರು ಇವರಿಬ್ಬರು ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳುತ್ತಿದ್ದರು.  ತಮ್ಮ ಪ್ರೀತಿ ಬಗ್ಗೆ ಈ ಜೋಡಿ ಇದುವರೆಗೂ ಹೇಳಿಕೊಂಡಿರಲಿಲ್ಲ.

ಇದೀಗ ಸದ್ದಿಲ್ಲದೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದೆ.

ನಾಗ ಚೈತನ್ಯ, ಸೋಭಿತಾ ಧೂಳಿಪಾಲ ಅವರು ಇಂದು ಬೆಳಗ್ಗೆ 9.42ಕ್ಕೆ ಉಂಗುರ ಬದಲಾಯಿಸಿಕೊಂಡಿದ್ದಾರೆ ಎಂದು ಅವರ ತಂದೆ ನಾಗಾರ್ಜುನ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ನಾಗಚೈತನ್ಯ ಅವರ ತಂದೆ, ನಟ ನಾಗಾರ್ಜುನ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ, ' ಇಂದು ಬೆಳಿಗ್ಗೆ 9.42ಕ್ಕೆ ನಮ್ಮ ಮಗ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ನಡೆದಿದ್ದು, ಅದನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ!! ಅವಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಸಂತೋಷದ ದಂಪತಿಗಳಿಗೆ ಅಭಿನಂದನೆಗಳು! ಅವರಿಗೆ ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ! 8.8.8 ಅನಂತ ಪ್ರೀತಿಯ ಪ್ರಾರಂಭ."  ಎಂದು ಬರೆದುಕೊಂಡಿದ್ದಾರೆ

2017ರಲ್ಲಿ ನಟಿ ಸಮಂತಾ ಅವರನ್ನು ಕೈಹಿಡಿದ ನಾಗಚೈತನ್ಯ ಅವರು 2021ರ ಅಕ್ಟೋಬರ್‌ ತಿಂಗಳಿನಲ್ಲಿ ಬೇರೆಯಾಗುತ್ತಿರುವ ಬಗ್ಗೆ  ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದರು. ಈ ಜೋಡಿ ಇದುವರೆಗೂ ದೂರವಾಗಲು ಕಾರಣ ಏನೆಂದು ಹೇಳಿಕೊಂಡಿಲ್ಲ.  ಇವರಿಬ್ಬರ ಡಿವೋರ್ಸ್ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಮುಂದಿನ ಸುದ್ದಿ
Show comments