Select Your Language

Notifications

webdunia
webdunia
webdunia
webdunia

ಸಮಂತಾ ಜತೆಗಿನ ರೊಮ್ಯಾನ್ಸ್‌ ನೋಡಿ ನಾಚಿ ನೀರಾದ ನಾಗಚೈತನ್ಯ

ಸಮಂತಾ ಜತೆಗಿನ ರೊಮ್ಯಾನ್ಸ್‌ ನೋಡಿ ನಾಚಿ ನೀರಾದ ನಾಗಚೈತನ್ಯ

sampriya

ಬೆಂಗಳೂರು , ಶುಕ್ರವಾರ, 24 ಮೇ 2024 (18:03 IST)
Photo By Instagram
ಬೆಂಗಳೂರು: 2014ರಲ್ಲಿ ಬಿಡುಗಡೆಯಾದ ನಟ ನಾಗಚೈತನ್ಯ ಹಾಗೂ ಸಮಂತಾ ಅವರ ಅಭಿನಯದ ʼಮನಂʼ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಸೂಪರ್‌ ಹಿಟ್‌ ಆಗಿತ್ತು.  ವಿಕ್ರಮ್ ಕೆ ಕುಮಾರ್ ನಿರ್ದೇಶನದ ಈ ಚಿತ್ರವು ಅಕ್ಕಿನೇನಿ ಕುಟುಂಬದ ಮೂರು ತಲೆಮಾರುಗಳನ್ನು ಒಳಗೊಂಡಿತ್ತು. ೧೦ ವರ್ಷದ ಸೆಲೆಬ್ರೇಶನ್‌ ಆಗಿ ಈ ಸಿನಿಮಾವನ್ನು ರೀ ರಿಲೀಸ್‌ ಮಾಡಿದ್ದು, ಅಭಿಮಾನಿಗಳು ಮತ್ತೇ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಖುಷಿಯಾಗಿದ್ದಾರೆ.

ನಿನ್ನೆ ರಾತ್ರಿ ದೇವಿ 70 ಎಂಎಂನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ಚಿತ್ರದ ಹೀರೋ  ನಾಗ ಚೈತನ್ಯ ಅವರು ಚಿತ್ರದ ನಿರ್ದೇಶಕರೊಂದಿಗೆ ಸಿನಿಮಾ ನೋಡಲು ಥಿಯೇಟರ್‌ಗೆ ಬಂದರು. ಇನ್ನೂ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದು ಅವರನ್ನು ಪ್ರೀತಿಯಿಂದ ಸುತ್ತುವರೆದರು.

ಈ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್‌  ವೈರಲ್‌ ಆಗಿದೆ. ಅದಲ್ಲದೆ  ನಾಗಚೈತನ್ಯ ಅವರು ತಮ್ಮ ಮಾಜಿ ಪತ್ನಿ ಸಮಂತಾ ಜತೆಗಿನ ಆನ್‌ ಸ್ಕ್ರೀನ್‌ ರೊಮ್ಯಾನ್ಸ್‌ ನೋಡಿ ನಾಚಿ ನೀರಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ರೊಮ್ಯಾಂಟಿಕ್ ದೃಶ್ಯಗಳನ್ನು ನಾಗಚೈತನ್ಯ ಅವರು ಆನಂದಿಸುತ್ತಿರುವುದನ್ನು ನೋಡುವುದು ಹೃದಯಸ್ಪರ್ಶಿ ದೃಶ್ಯವಾಗಿತ್ತು.

2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ ಮತು ಸಮಂತಾ ಅವರು 2021ರಲ್ಲಿ ದೂರವಾದರೂ.  ಆದರೆ ಅವರು ಅಭಿಮಾನಿಗಳು ಮಾತ್ರ ಈ ಜೋಡಿ ಮತ್ತೇ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ. ಇದೀಗ ನಾಗಚೈತನ್ಯ ಅವರು ಮಾಜಿ ಪತ್ನಿ ಸಮಂತಾ ಜತೆಗಿನ ರೊಮ್ಯಾನ್ಸ್‌ ನೋಡಿ ನಾಚಿ ನೀರಾಗುವುದನ್ನು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನಿಯರ್‌ ಎನ್‌ಟಿಆರ್‌ಗೆ ಜೋಡಿಯಾಗಲಿದ್ದಾರೆ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ