Select Your Language

Notifications

webdunia
webdunia
webdunia
webdunia

'ಮೌನಂ' ಡಿ ಬಾಸ್ ಬ್ಲೆಸಿಂಗ್: ನಾಳೆ ಟ್ರೇಲರ್ ಲಾಂಚ್..!

'ಮೌನಂ' ಡಿ ಬಾಸ್ ಬ್ಲೆಸಿಂಗ್: ನಾಳೆ ಟ್ರೇಲರ್ ಲಾಂಚ್..!
ಬೆಂಗಳೂರು , ಸೋಮವಾರ, 3 ಫೆಬ್ರವರಿ 2020 (15:32 IST)
ಮೌನ..ಇದು ಎಲ್ಲರೊಳಗೂ ಇರುವ ಸ್ನೇಹಿತ. ಏನೇ ಕ್ರಿಯೆಟೀವ್ ಆಗಿ ಮನುಷ್ಯ ಇದ್ದರು ಅವನೊಳಗೊಬ್ಬ ಮೌನಿ ಇದ್ದೆ ಇರ್ತಾನೆ. ಎಲ್ಲವನ್ನು ಹೇಳಿಕೊಂಡರು ಯಾವುದೋ ಒಂದು ಹೇಳಿಕೊಳ್ಳಲಾಗದ ನೋವು ನಮ್ಮನ್ನ ಮೌನವಾಗಿಸಿಬಿಡುತ್ತೆ. ಇಂಥ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಪ್ರೇಕ್ಷರೆದುರಿಗಿ ಮೌನ ಮುರಿಯಲು 'ಮೌನಂ' ತಂಡ ರೆಡಿಯಾಗಿದೆ. ನಾಳೆ 'ಮೌನಂ' ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದ ಟ್ರೇಲೃ ಲಾಂಚ್ ಮಾಡಲಿದ್ದಾರೆ. ನಾಳೆ ಸಂಜೆ 6 ಗಂಟೆಗೆ ಟೀ ಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಲಿದೆ.
ಇದೊಂದು ಸೈಕಾಲಜಿಕಲ್, ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಪಂಚದಲ್ಲಿರುವ ಒಳ್ಳೆಯದ್ದು, ಕೆಟ್ಟದ್ದು ಎರಡನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕೆಂಬ ಅನೇಕ ಮೆಸೇಜ್ ಗಳಿವೆ. ಸಿನಿಮಾದ ಬಗ್ಗೆ ಖುಷಿ ಹಂಚಿಕೊಂಡ ನಿರ್ದೇಶಕ ರಾಜ್ ಪಂಡಿತ್, ಎಲ್ಲರೊಳು ನೋವಿರುತ್ತೆ ಆ ನೋವನ್ನ ಹಂಚಿಕೊಳ್ಳದೇ ಮೌನಕ್ಕೆ ಶರಣಾಗುವುದು ಸಿನಿಮಾದ ಒಂದು ಎಳೆ. ಜೊತೆಗೆ ಇದು ಮನಿಷ್ಯನ ಜಗತ್ತು. ಒಳ್ಳೆಯದ್ದು ಕೆಟ್ಟದ್ದು ಎರಡು ಇರುತ್ತೆ. ಮಕ್ಕಳಿಗೆ ಎರಡರ ಪರಿಚಯವನ್ನು ಮಾಡಿಕೊಡಬೇಕಾಗುತ್ತೆ. ಕೆಟ್ಟದ್ದು ಅಂತ ಅದರ ಬಗ್ಗೆ ತಿಳಿಸದೇ ಬಿಟ್ಟರೆ ಕುತೂಹಲ ಬೆಳೆದು ಅದನ್ನ ಮಕ್ಕಳು ಚಟವಾಗಿ ಮೈಗರ ಹತ್ತಿಸಿಕೊಳ್ಳುತ್ತಾರೆ. ಹೀಗಾಗಿ ಕುತೂಹಲವನ್ನ ತಣಿಸುವ ಜವಬ್ದಾರಿ ಪೋಷಕರದ್ದೇ ಆಗಿರುತ್ತೆ. ಹೇಗೆ ಮಕ್ಕಳ ಜೊತೆ ಪೋಷಕರು ನಡೆದುಕೊಳ್ಳುತ್ತಾರೆ ಎಂಬ ಇಂಟ್ರೆದ್ಟಿಂಗ್ ಕಥೆ ಸಿನಿಮಾದಲ್ಲಿದೆ ಅಂತಾರೆ ನಿರ್ದೇಶಕರು. ಇಂತ ಒಳ್ಳೆ ಮೆಸೇಜ್ ಇರುವ ಸಿನಿಮಾದ ಟ್ರೇಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಲಾಂಚ್ ಮಾಡಿಸುತ್ತಿರುವಿದು ಚಿತ್ರತಂಡಕ್ಕೆ ಹೆಚ್ಚು ಖುಷಿ ನೀಡಿದೆ.
webdunia
ನಿಹಾರಿಕ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ 'ಮೌನಂ' ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ರಾಜ್ ಪಂಡಿತ್ ಅವರೇ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಶಂಕರ್ ಛಾಯಾಗ್ರಹಣ, ಆರಶ್ ರಿಶಿಕ್ ಸಂಗೀತ ಸಂಯೋಜನೆ, ಗುರುಮೂರ್ತಿ ಹೆಗಡೆ, ಅನುರಂಜನ್ ಸಂಕಲನವಿದೆ. ಕೌರವ್ ವೆಂಕಟೇಶ್, ಶಿವು ಸಾಹಸ ನಿರ್ದೇಶನ ಮಾಡಿದ್ದಾರೆ. 'ಮೌನಂ' ಈಗಾಗಲೇ ಪೋಸ್ಟರ್ ನಿಂದ ಸಾಕಷ್ಟು ಸದ್ದು ಮಾಡಿತ್ತು. ಹೀಗಾಗಿ ಟ್ರೇಲರ್ ನೋಡುಗರಿಗೆ ಸಿನಿಮಾವನ್ನ ಅಂದಾಜಿಸುವ ಅವಕಾಶ ಮಾಡಿಕೊಡಲಿದೆ. ಅದ್ರಲ್ಲೂ ಡಿ ಬಾಸ್ ಟ್ರೇಲರ್ ಲಾಂಚ್ ಮಾಡುತ್ತುದ್ದು. ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಮಾಕ್ಟೈಲ್ ಮೆಚ್ಚಿದ ಕಿಚ್ಚ ಹೇಳಿದ್ದೇನು..?