ತೆಲುಗಿನಲ್ಲಿ ಕಿಚ್ಚೆಬ್ಬಿಸಿದ ಹಾಟ್ ನಟಿ ಕೃತಿಕ ಶರ್ಮಾ

ಗುರುವಾರ, 14 ಮಾರ್ಚ್ 2019 (20:08 IST)
ಚಿತ್ರರಂಗದಲ್ಲಿಯೇ ಮೇರು ಖ್ಯಾತಿ ಪಡೆದ ಪೂರಿ ಜಗನ್ನಾಥ್ ಭಿನ್ನ ರೀತಿಯ ಸಿನೆಮಾಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಎತ್ತಿದ ಕೈ. ಅವರ ನಿರ್ದೇಶನದಲ್ಲಿ ಹಲವಾರು ಯುವತಿಯರು ತೆಲಗು ಚಿತ್ರರಂಗಕ್ಕೆ ಪರಿಚಯಲಾಗಿದ್ದಾರೆ. ಅದರಂತೆ ಎಷ್ಟು ಹೀರೋಯಿನ್‌‌ಗಳು ಓವರ್‌ನೈಟ್‌ನಲ್ಲಿ ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ.
ಸಿನೆಮಾ ನಿರ್ಮಾಣದಲ್ಲಿ ಬಿಜಿಯಾಗಿರುವ ಜಗನ್ನಾಥ್, ಇದೀಗ ತಮ್ಮ ಪುತ್ರ ಆಕಾಶ್‌ನನ್ನು ಹಿರೋ ಆಗಿಸಲು ಶತವಿಧದಲ್ಲಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.  
 
ಪುತ್ರ ಆಕಾಶ್‌ಗಾಗಿ ನಿರ್ಮಿಸಿದ ಮೊದಲ ಚಿತ್ರವಾದ ಮೆಹಬೂಬ್ ಯಶಸ್ವಿಯಾಗಲಿಲ್ಲ. ಇದೀಗ ರೋಮ್ಯಾನ್ಸ್ ಎನ್ನುವ ಚಿತ್ರ ನಿರ್ಮಿಸಲು ಸಿದ್ದರಾಗಿದ್ದಾರೆ. ಜಗನ್ನಾಥ್ ಸಹಾಯಕ ನಿರ್ದೇಶಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
 
ಈ ಸಿನೆಮಾಗಾಗಿ ಹೊಸ ಹಿರೋಯಿನ್ ಹುಡುಕಾಟದಲ್ಲಿದ್ದು ಇದೀಗ ಕೃತಿಕ ಶರ್ಮಾ ಎನ್ನುವ ನಟಿಯನ್ನು ಆಯ್ಕೆ ಮಾಡಿದ್ದಾರೆ.ಸಿನೆಮಾ ಕ್ಷೇತ್ರಕ್ಕೆ ಇರಬೇಕಾಗಿರುವ ಗ್ಲ್ಯಾಮರ್, ನಟನೆ ಎಲ್ಲವು ಇರುವುದರಿಂದ ಜಗನ್ನಾಥ್ ಆಯ್ಕೆಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನನ್ನ ಪತಿ ವರ್ಜಿನ್ ಅಲ್ಲ, ಗರ್ಲ್‌ಫೆಂಡ್ ಇದ್ದಾರೆ ಏನ್ ಮಾಡಲಿ: ನಟಿ ಸ್ವಾತಿ