ಕೊಚ್ಚಿ: ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಮಲಯಾಳಂ ಭಾಷೆಯಲ್ಲಿ ಮೂಡಿಬಂದಿದ್ದ ದೃಶ್ಯಂ ಸಿನಿಮಾ ಸೂಪರ್ ಹಿಟ್ ಆಗಿ ಕೊನೆಗೆ ಅದು ಹಿಂದಿ, ಕನ್ನಡದಲ್ಲೂ ರಿಮೇಕ್ ಆಗಿತ್ತು. ಈಗ ಆ ಸಿನಿಮಾದ ಎರಡನೇ ಭಾಗ ಮೂಡಿಬರಲಿದೆ.
ನಿನ್ನೆ ತಮ್ಮ ಜನ್ಮದಿನದಂದು ಮೋಹನಲ್ ಲಾಲ್ ದೃಶ್ಯಂ 2 ಸಿನಿಮಾ ಮಾಡುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಪ್ರೋಮೋ ವಿಡಿಯೋದೊಂದಿಗೆ ದೃಶ್ಯಂ 2 ಸಿನಿಮಾ ಮಾಡುತ್ತಿರುವುದಾಗಿ ಮೋಹನ್ ಲಾಲ್ ಸಿಹಿ ಸುದ್ದಿ ನೀಡಿದ್ದಾರೆ. ಲಾಲ್ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೇ ಟ್ವಿಟರಿಗರು ಖುಷಿಯಾಗಿದ್ದು, ಹಲವು ಮೆಮೆಗಳ ಮೂಲಕ ಶುಭ ಹಾರೈಸಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್, ಹಿಂದಿಯಲ್ಲಿ ಅಜಯ್ ದೇವಗನ್ ದೃಶ್ಯಂ ಮೊದಲ ಭಾಗದ ರಿಮೇಕ್ ನಲ್ಲಿ ಅಭಿನಯಿಸಿದ್ದರು.