ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಸೀರಿಯಲ್‌ಗಳ ಮೂಲಕ ಮನೆ ಮಾತಾಗಿರುವ ನಟಿ ಮೇಘನಾ ಶಂಕರಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜಯಂತ್ ಜೊತೆ ನಟಿ ಹಸೆಮಣೆ ಏರಿದ್ದಾರೆ. ಜೋಡಿಯ ಮದುವೆ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ.
ಫೆ.9ರಂದು ಜಯಂತ್ ಜೊತೆ ಮೇಘನಾ ಮದುವೆ ಬೆಂಗಳೂರಿನಲ್ಲಿ ಜರುಗಿದೆ. ಗುರುಹಿರಿಯರ ಸಮ್ಮುಖದಲ್ಲಿ ಮದುವೆ ಸಂಭ್ರಮದಿಂದ ನಡೆದಿದೆ.
ಮದುವೆ ಸಮಾರಂಭದಲ್ಲಿ ಕಾವ್ಯ ಶೈವ, ಸೀತಾರಾಮ ಸೀರಿಯಲ್ ಟೀಮ್ ಸೇರಿದಂತೆ ಅನೇಕರು ಮದುವೆಗೆ ಹಾಜರಿ ಹಾಕಿದ್ದಾರೆ. ಈಚೆಗೆ ನಟಿ ಜಯಂತ್ ಜತೆ ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಪ್ರೀ ವೆಡ್ಡಿಂಗ್ ಶೂಟ್ ಕೂಡಾ ಮಾಡಿಕೊಂಡಿದ್ದರು.