ಬೆಂಗಳೂರು: ನಟಿ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಉದ್ದ ಕೂದಲುಗಳಿಗೆ ಕತ್ತರಿ ಹಾಕಿದ್ದಾರೆ. ಮಗನ ಮುಡಿ ದೇವರಿಗೆ ಅರ್ಪಿಸಿದ್ದಾರೆ.
ರಾಯನ್ ಗೆ ಇತ್ತೀಚೆಗೆ ಒಂದು ವರ್ಷ ಪೂರ್ತಿಯಾಗಿತ್ತು. ಇದರ ಬೆನ್ನಲ್ಲೇ ಮೇಘನಾ ದೇವರಿಗೆ ಮುಡಿ ಕೊಡುವ ಮೂಲಕ ಹರಕೆ ತೀರಿಸಿದ್ದಾರೆ.
ನಮ್ಮ ಮನೆಯಲ್ಲೊಬ್ಬ ಮೊಟ್ಟೆ ಬಾಸ್ ಎಂದು ಮೇಘನಾ ಮಗನ ಹೊಸ ಲುಕ್ ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇತ್ತೀಚೆಗೆ ರಾಯನ್ ನಾಮಕರಣ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ನೆರವೇರಿತ್ತು.