Webdunia - Bharat's app for daily news and videos

Install App

ಕೊರೋನಾ ಅನುಭವ ಹಂಚಿಕೊಂಡ ಮೇಘನಾ ರಾಜ್

Webdunia
ಬುಧವಾರ, 21 ಏಪ್ರಿಲ್ 2021 (10:30 IST)
ಬೆಂಗಳೂರು: ನಟಿ ಮೇಘನಾ ಸರ್ಜಾ ಇತ್ತೀಚೆಗೆ ಕೊರೋನಾ ಭಯದಿಂದ ಹೋಂ ಕ್ವಾರಂಟೈನ್ ಗೊಳಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.


ಕಳೆದ ಡಿಸೆಂಬರ್ ನಲ್ಲಿ ಮೇಘನಾ ತಂದೆ, ನಟ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಜೋಷಾಯ್ ಕೊರೋನಾ ಸೋಂಕಿತರಾಗಿದ್ದರು. ಜೊತೆಗೆ ಸ್ವತಃ ತಾವೇ ಕೊರೋನಾ ಅಪಾಯಕ್ಕೊಳಗಾಗಿದ್ದರು. ಈ ಅನುಭವಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜನರು ಸುರಕ್ಷಿತವಾಗಿರುವಂತೆ ಮನವಿ ಮಾಡಿದ್ದಾರೆ.

‘ಇತ್ತೀಚೆಗೆ ನಾನೂ ಕೊರೋನಾ ಅಪಾಯಕ್ಕೊಳಗಾಗಿದ್ದೆ. ಪುಟ್ಟ ಮಗು, ವಯಸ್ಸಾದ ತಂದೆ-ತಾಯಿ ಇದ್ದಿದ್ದರಿಂದ ಕೆಲವು ದಿನಗಳ ಕಾಲ ನಾನೂ ಐಸೋಲೇಟ್ ಆದೆ. ನನ್ನ ತಂದೆ-ತಾಯಿ, ಪುಟ್ಟ ಮಗನನ್ನು ನೆನೆದು ಮಾನಸಿಕವಾಗಿ ಭಯಗೊಂಡಿದ್ದೆ. ಅದೃಷ್ಟವಶಾತ್ ಲಕ್ಷಣಗಳಿದ್ದರೂ ಕೊನೆಗೆ ಪರೀಕ್ಷಿಸಿದಾಗ ನೆಗೆಟಿವ್ ವರದಿ ಬಂತು. ಕೆಲವರಿಗೆ ಇದು ಬೇಗನೇ ವಾಸಿಯಾಗುತ್ತದೆ. ಮತ್ತೆ ಕೆಲವರಿಗೆ ಹಲವು ಸಮಯಗಳೇ ಹಿಡಿಯುತ್ತವೆ. ಆದರೆ ನಮ್ಮಿಂದಾಗಿ ಇನ್ನೊಬ್ಬರಿಗೆ ಹರಡದಂತೆ ತಡೆಯುವುದೇ ನಾವು ಮಾಡಬಹುದಾದ ಅತ್ಯುತ್ತಮ ಕೆಲಸ. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸ್ ಮಾಡೋಣ. ಆದಷ್ಟು ಸುರಕ್ಷಿತವಾಗಿರೋಣ’ ಎಂದು ಮೇಘನಾ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments