ಡಿ ಬಾಸ್ ದರ್ಶನ್ ಜೊತೆಗಿನ ಈ ಗಳಿಗೆ ಎಂದೂ ಮರೆಯಲಾಗದು ಎಂದ ಮೇಘಾ ಶೆಟ್ಟಿ

Webdunia
ಸೋಮವಾರ, 25 ಡಿಸೆಂಬರ್ 2023 (10:45 IST)
ಬೆಂಗಳೂರು: ನಟಿ ಮೇಘಾ ಶೆಟ್ಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪ್ಪಟ ಅಭಿಮಾನಿ ಎಂದು ಎಲ್ಲರಿಗೂ ಗೊತ್ತು. ಮೇಘಾ ಇತ್ತೀಚೆಗೆ ಡಿ ಬಾಸ್ ಪಾಳಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಜೊತೆಗಿರುವ ಸ್ನೇಹ ಸಂಬಂಧಕ್ಕೆ ಸಾಕ್ಷಿ.

ಧನ್ವೀರ್ ಗೌಡ ಜೊತೆ ಮೇಘಾ ನಾಯಕಿಯಾಗಿ ಅಭಿನಯಿಸಿದ್ದ ಕೈವ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ದರ್ಶನ್ ಬಂದಿದ್ದರು.

ಅದಾದ ಬಳಿಕ ದರ್ಶನ್‍ ನಾಯಕರಾಗಿರುವ ಕಾಟೇರ ಸಿನಿಮಾದ ಹುಬ್ಬಳ್ಳಿ ಮತ್ತು ಮಂಡ್ಯ ಪ್ರಿರಿಲೀಸ್ ಈವೆಂಟ್ ನಲ್ಲಿ ಮೇಘಾ ಹಾಜರಾಗಿದ್ದರು. ಮಂಡ್ಯದಲ್ಲಂತೂ ಮೇಘಾ ಸ್ಟೇಜ್ ಮೇಲೆ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಮನ ಗೆದ್ದಿದ್ದರು.

ರಂಗು ರಂಗಿನ ವೇದಿಕೆಯಲ್ಲಿ ಕುಣಿದ ಮೇಘಾ ಕೊನೆಗೆ ಸ್ಟೇಜ್ ಕೆಳಗೆ ಬಂದು ನಟ ದರ್ಶನ್ ರನ್ನೂ ಜೊತೆಗೆ ಹೆಜ್ಜೆ ಹಾಕುವಂತೆ ಮಾಡಿದ್ದರು. ದರ್ಶನ್ ಮತ್ತು ಮೇಘಾ ಶೆಟ್ಟಿ ಡ್ಯಾನ್ಸ್ ಗೆ ಸ್ಟೆಪ್ ಹಾಕಿದ ವಿಡಿಯೋ ಎಲ್ಲೆಡೆ ವೈರಲ್‍ ಆಗಿತ್ತು. ಈ ಬಗ್ಗೆ ಮಾತನಾಡಿರುವ ಮೇಘಾ ಈ ಗಳಿಗೆಯನ್ನು ನಾನು ಜೀವನದಲ್ಲೂ ಎಂದೂ ಮರೆಯಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್, ಆತನ ಮಗನ ವಿರುದ್ಧ 23 ಪ್ರಕರಣ, ಲುಕ್‌ ಔಟ್ ನೋಟಿಸ್ ಜಾರಿ

ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಫಾರ್ಮ್ ಹೌಸ್ ನ ಕುದುರೆಗಳ ಮಾರಾಟ

ರಾಜ್ಯ ಸರ್ಕಾರದ ವಿಶೇಷ ಯೋಜನೆಗೆ ರಾಯಭಾರಿಯಾದ ವಸಿಷ್ಠ ಸಿಂಹ

ಬಿಗ್‌ಬಾಸ್‌ ವೀಕ್ಷಕರಲ್ಲಿ ಕ್ಷಮೆಕೋರಿದ ಕಲರ್ಸ್ ಕನ್ನಡ ವಾಹಿನಿ

ರಾತ್ರೋರಾತ್ರಿ ದೊಡ್ಮನೆಯಿಂದ ಹೊರಬಂದ ಸ್ಪರ್ಧಿಗಳು, ರಕ್ಷಿತಾ ಹೇಳಿದ ಆ ಮಾತಿಗೆ ತಥಾಸ್ತು ಎಂದ್ರಾ ದೇವರು

ಮುಂದಿನ ಸುದ್ದಿ
Show comments