ಹೈದರಾಬಾದ್: ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಪ್ರಿ ರಿಲೀಸ್ ಈವೆಂಟ್ ನ್ನು ಚಿತ್ರತಂಡ ಭರ್ಜರಿಯಾಗಿ ಆಯೋಜಿಸಲಿದೆ.
ಮೂಲಗಳ ಪ್ರಕಾರ ಜೇಮ್ಸ್ ಪ್ರಿರಿಲೀಸ್ ಕಾರ್ಯಕ್ರಮವನ್ನು ಹೊಸಪೇಟೆಯಲ್ಲಿ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆಯಂತೆ. ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಚಿತ್ರತಂಡ ಮಾರ್ಚ್ 17 ರಂದು ಪುನೀತ್ ಬರ್ತ್ ಡೇಗೆ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಪುನೀತ್ ಕೊನೆಯ ಸಿನಿಮಾ ಇದಾಗಿರುವುದರಿಂದ ಅದನ್ನು ವಿಶೇಷವಾಗಿಸಲು ಚಿತ್ರತಂಡ ಎಲ್ಲಾ ಪ್ರಯತ್ನ ನಡೆಸಿದೆ.