Publish Date: Fri, 25 Feb 2022 (16:59 IST)
Updated Date: Fri, 25 Feb 2022 (17:01 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿದ್ದ ಜೇಮ್ಸ್ ಸಿನಿಮಾ ರಿಲೀಸ್ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಮಾರ್ಚ್ 17 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ದೇಶಕರು ಈ ಮೊದಲು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೀಗ ಚಿತ್ರತಂಡ ಅಧಿಕೃತವಾಗಿ ಜೇಮ್ಸ್ ಸಿನಿಮಾ ಮಾರ್ಚ್ 17 ರಂದು ಪುನೀತ್ ಬರ್ತ್ ಡೇ ದಿನ ಬಿಡುಗಡೆಯಾಗುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ಮಾರ್ಚ್ 17 ಕ್ಕೆ ಕಿಂಗ್ ಆಗಮನವಾಗಲಿದೆ ಎಂದು ಹೊಸ ಪೋಸ್ಟರ್ ಒಂದನ್ನು ಚಿತ್ರತಂಡ ಹೊರಬಿಟ್ಟಿದೆ. ಇದನ್ನು ಶಿವರಾಜ್ ಕುಮಾರ್ ಕೂಡಾ ಹಂಚಿಕೊಂಡಿದ್ದಾರೆ.