Select Your Language

Notifications

webdunia
webdunia
webdunia
webdunia

ಟೀಸರ್ ಮೂಲಕ ಮತ್ತೆ ಸದ್ದು ಮಾಡಿತು ಮೀನಾ ಬಜಾರ್!

ಟೀಸರ್ ಮೂಲಕ ಮತ್ತೆ ಸದ್ದು ಮಾಡಿತು ಮೀನಾ ಬಜಾರ್!
ಬೆಂಗಳೂರು , ಮಂಗಳವಾರ, 1 ಅಕ್ಟೋಬರ್ 2019 (14:13 IST)
ಕಿರುತೆರೆ ಜಗತ್ತಿನ ಸ್ಟಾರ್ ನಿರ್ದೇಶಕರೆಂದೇ ಹೆಸರಾಗಿರುವವರು ರಾಣಾ ಸುನೀಲ್ ಕುಮಾರ್ ಸಿಂಗ್. ಈ ಹಿಂದೆ ಮದುವೆ ಮನೆ ಎಂಬ ಚಿತ್ರದ ಮೂಲಕ ಹಿರಿತೆರೆಗೂ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿ ಗೆಲುವು ಕಂಡಿದ್ದ ಅವರೀಗ ತಿತಿತಿ.ಮೀನಾ ಬಜಾರ್. ಕಾಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರು ವರ್ಷಾಂತರಗಳ ಕಾಲ ಶ್ರಮ ವಹಿಸಿ ರೂಪಿಸಿರೋ ಮೀನಾ ಬಜಾರ್ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಅದು ಮತ್ತಷ್ಟು ತೀವ್ರವಾಗುವಂಥಾ ಟೀಸರ್ ಇದೀಗ ಬಿಡುಗಡೆಗೊಂಡಿದೆ.
ಈಗಾಗಲೇ ಈ ಸಿನಿಮಾದ ಅದ್ದೂರಿ ಮೇಕಿಂಗ್ ಮುನ್ಸೂಚನೆ ಮತ್ತು ಭಿನ್ನ ಕಥಾನಕದ ಸುಳಿವಿನೊಂದಿಗೆ ಪ್ರೇಕ್ಷಕರನ್ನು ಸೆಳೆದಿಟ್ಟುಕೊಂಡಿದೆ. ಇದೀಗ ಬಿಡುಗಡೆಯಾಗಿರೋ ಟೀಸರ್ನಲ್ಲಿಯಂತೂ ಆ ಕುತೂಹಲ ಇಮ್ಮಡಿಸುವಂಥಾ ಅಂಶಗಳೇ ಢಾಳಾಗಿವೆ. ಇದು ಮೋಹಕ ಅಂಶಗಳು ಮತ್ತು ನಿಗೂಢ ಕಥಾ ಹಂದರದ ಸಮ್ಮಿಶ್ರಣದೊಂದಿಗೇ ಮನ ಸೆಳೆಯುವಂಥಾ ಟೀಸರ್. ಇಲ್ಲಿ ಪ್ರಧಾನವಾಗಿ ದೃಷ್ಯ ಶ್ರೀಮಂತಿಕೆ ಕಣ್ಣಿಗೆ ಕಟ್ಟುವಂತಿದೆ. ಇದರೊಂದಿಗೇ ಅದೇನು ಹರಸಾಹಸ ಪಟ್ಟರೂ ಊಹಿಸಲು ಸಾಧ್ಯವಾಗದಂಥಾ ಕಥೆಯ ಮರ್ಮದೊಂದಿಗೆ ಈ ಟೀಸರ್ ಈಗ ಎಲ್ಲೆಡೆ ಹರಿದಾಡುತ್ತಾ ವ್ಯಾಪಕವಾಗಿಯೇ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
 
ಮೀನಾ ಬಜಾóರ್ ಕನ್ನಡ ಮಾತ್ರವಲ್ಲದೇ ಏಕ ಕಾಲದಲ್ಲಿಯೇ ತೆಲುಗಿನಲ್ಲಿಯೂ ರೆಡಿಯಾಗಿದೆ. ಪ್ರತಿಯೊಂದನ್ನೂ ಕೂಡಾ ಒಂದೇ ಸಲಕ್ಕೆ ಮಾಡಿ ಎರಡೂ ಭಾಷೆಗಳಲ್ಲಿ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ಕನ್ನಡದಕ್ಕೆ ಬೆಂಗಳೂರಿನಲ್ಲಿ ಹಾಗೂ ತೆಲುಗಿಗೆ ಹೈದ್ರಾಬಾದಿನಲ್ಲಿ ಡಬ್ಬಿಂಗ್ ಕೂಡಾ ನಡೆದಿದೆ. ಆಗಾಗ ಹೊರ ಬರುತ್ತಿರೋ ಈ ಸಿನಿಮಾ ಪೋಸ್ಟರುಗಳೇ ಪ್ರೇಕ್ಷಕರನ್ನು ಸೆಳೆದುಕೊಂಡಿವೆ. ರಾಣಾ ಸುನೀಲ್ ಕುಮಾರ್ ಸಿಂಗ್ ಅವರ ಧಾರಾವಾಹಿಗಳ ಅದ್ದೂರಿತನದ ಪರಿಚಯವಿರುವವರಿಗೆ ಖಂಡಿತಾ ಮೀನಾ ಬಜಾರಿನ ಮೇಲೂ ನಿರೀಕ್ಷೆಗಳಿವೆ. ಈಗ ಹೊರ ಬಂದಿರೋ ಟೀಸರ್ ಮೂಲಕ ಬಿಡುಗಡೆಯ ಕಡೇ ಕ್ಷಣಗಳಲ್ಲಿ ಮೀನಾ ಬಜಾರ್ ಮತ್ತೆ ಸದ್ದು ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಲತಾ ಜತೆಗೆ ಸೂಪರ್ ಸ್ಟಾರ್ ರಜನೀಕಾಂತ್ ಫೋಟೋ ವೈರಲ್