Select Your Language

Notifications

webdunia
webdunia
webdunia
webdunia

ಕನ್ನಡ, ತೆಲುಗು ಭಾಷೆಗಳಲ್ಲಿ ಬರಲಿದೆ www.ಮೀನಾ ಬಜಾರ್

www.ಮೀನಾ ಬಜಾರ್
ಬೆಂಗಳೂರು , ಬುಧವಾರ, 7 ಆಗಸ್ಟ್ 2019 (18:06 IST)
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮದುವೆ ಮನೆ ಸಿನಿಮಾವನ್ನು ನಿರ್ದೇಶಿಸಿದ್ದವರು ರಾಣಾ ಸುನೀಲ್ ಕುಮಾರ್ ಸಿಂಗ್. ಈಗವರು www.ಮೀನಾ ಬಜಾರ್ ಸಿನಿಮಾವನ್ನು ಕಂಪ್ಲೀಟ್ ಮಾಡಿದ್ದಾರೆ. 
ಈ ಸಿನಿಮಾದ ಮೂಲಕ ನಿರ್ಮಾಣ, ನಿರ್ದೇಶನದ ಜೊತೆಗೆ ನಾಯಕನಟರಾಗಿಯೂ ಸುನೀಲ್ ಕುಮಾರ್ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಮೈಸೂರು, ಹೈದರಾಬಾದ್, ಕೊಡಚಾದ್ರಿ, ಆಗುಂಬೆ ಸೇರಿದಂತೆ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ ಅರವತ್ತಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
www.ಮೀನಾ ಬಜಾರ್ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡ ಚಿತ್ರವಾಗಿದೆ. ಇದು ಡಬ್ಬಿಂಗ್ ಸಿನಿಮಾವಲ್ಲ. ಒಬ್ಬ ಕಲಾವಿದ ಒಂದು ಡೈಲಾಗನ್ನು ಕನ್ನಡದಲ್ಲಿ ಹೇಳುವ ಜತೆಗೆ ಅದೇ ಡೈಲಾಗನ್ನು ಮತ್ತೆ ತೆಲುಗಿನಲ್ಲಿ ಹೇಳಬೇಕು. ಈ ರೀತಿ ತೆಗೆದುಕೊಂಡ ಶಾಟ್’ಗಳನ್ನು ಎಡಿಟಿಂಗ್ ಸ್ಟುಡಿಯೋದಲ್ಲಿ ಆಯಾ ಭಾಷೆಗಳಿಗೆ ತಕ್ಕಂತೆ ಬೇರ್ಪಡಿಸಿ ಎಡಿಟ್ ಮಾಡಲಾಗುವುದು. ಆಗ ಕನ್ನಡದ್ದೇ ಒಂದು ಸಿನಿಮಾ. ತೆಲುಗಿನದ್ದೇ ಇನ್ನೊಂದು ಸಿನಿಮಾ ಎಡಿಟಿಂಗ್ ಸ್ಟುಡಿಯೋದಿಂದ ಹೊರಬರುತ್ತದೆ. 
ನಂತರ ಕನ್ನಡದ ಚಿತ್ರಕ್ಕೆ ಬೆಂಗಳೂರಿನಲ್ಲಿ ಡಬ್ಬಿಂಗ್ ನಡೆದರೆ, ಹೈದರಾಬಾದ್ ನಲ್ಲಿ ತೆಲುಗು ವರ್ಷನ್ ಡಬ್ಬಿಂಗ್ ನಡೆಯುತ್ತದೆ. ಸೌಂಡ್ ಎಫೆಕ್ಟ್ ಮಾಡುವವರು ಸಹ ಕನ್ನಡಕ್ಕೆ ಒಂದು ಬಾರಿ ತೆಲುಗಿಗೆ ಇನ್ನೊಂದು ಬಾರಿ ಮಾಡಬೇಕು. ಇದೇ ರೀತಿ ಆರ್ ಆರ್, ಡಿ.ಟಿ.ಎಸ್, ಡಿ.ಐ ಎಲ್ಲ ವಿಭಾಗಗಳಿಗೂ ಅನ್ವಯವಾಗುತ್ತದೆ. 
ಈಗಾಗಲೇ ಎಲ್ಲ ತಾಂತ್ರಿಕ ಕೆಲಸಗಳನ್ನೂ ಪೂರೈಸಿಕೊಂಡು www.ಮೀನಾ ಬಜಾರ್ ಚಿತ್ರದ ತೆಲುಗು ಆವೃತ್ತಿ ತಯಾರಾಗಿದೆ. ಅತಿ ಶೀಘ್ರದಲ್ಲೇ ಕನ್ನಡದ ಮೊದಲ ಪ್ರತಿ ಕೂಡಾ ಸಿದ್ಧಗೊಳ್ಳಲಿದೆ ಎಂದು ರಾಣಾ ಸುನೀಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
www.ಮೀನಾ ಬಜಾರ್ ಎರಡು ವರ್ಷನ್ ಗಳನ್ನೂ ರಾಣಾ ಸುನೀಲ್ ಕುಮಾರ್ ಅವರೇ ರಚಿಸಿ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರಕ್ಕೆ ನಾಗೇಂದ್ರ ಸಿಂಗ್ ಸಿ.ಎನ್. ಬಂಡವಾಳ ಹೂಡಿದ್ದಾರೆ. ಉಳಿದಂತೆ ಮ್ಯಾಥ್ಯೂ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ ಚಿತ್ರಕ್ಕಿದೆ. ರಾಣಾ ಸುನೀಲ್ ಕುಮಾರ್ ಸಿಂಗ್, ರಾಜೇಶ್ ನಟರಂಗ, ವೈಭವಿ ಜೋಶಿ, ಶ್ರೀಜಿತ ಘೋಷ್, ಮಧುಸೂದನ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸುನಿಲ್ ಶೆಟ್ಟಿ ಪುತ್ರನಿಗೆ ಕಿಚ್ಚ ಸುದೀಪ್ ಸ್ಪೆಷಲ್ ವಿಶ್