Select Your Language

Notifications

webdunia
webdunia
webdunia
webdunia

ಜುಲೈ 16ರಂದು ಮ್ಯಾಕ್ಸ್‌ ಸಿನಿಮಾದ ಟೀಸರ್‌ ಬಿಡುಗಡೆ: ಇದು ಸುದೀಪ್​ ನಟನೆಯ 46ನೇ ಸಿನಿಮಾ

ಜುಲೈ 16ರಂದು ಮ್ಯಾಕ್ಸ್‌ ಸಿನಿಮಾದ ಟೀಸರ್‌ ಬಿಡುಗಡೆ: ಇದು ಸುದೀಪ್​ ನಟನೆಯ 46ನೇ ಸಿನಿಮಾ

Sampriya

ಬೆಂಗಳೂರು , ಗುರುವಾರ, 11 ಜುಲೈ 2024 (17:22 IST)
Photo Courtesy X
ಬೆಂಗಳೂರು: ನಟ ಕಿಚ್ಚ ಸುದೀಪ್​ ಅಭಿನಯದ ಮ್ಯಾಕ್ಸ್​ ಸಿನಿಮಾದ ಹೊಸ ಟೀಸರ್​ ಜುಲೈ 16ರಂದು ಮಧ್ಯಾಹ್ನ 12.34ಕ್ಕೆ ಬಿಡುಗಡೆ ಆಗಲಿದೆ.

ಬಿಗ್‌ ಬಜೆಟ್‌ನ ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಬಗ್ಗೆ ಸುದೀಪ್​ ಅವರು ಹೊಸ ಅಪ್​ಡೇಟ್​ ನೀಡಿದ್ದಾರೆ. ಹೊಸ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಅವರು ಡಬಲ್​ ಮಾಡಿದ್ದಾರೆ.  

ಕಾಲಿವುಡ್​ ನಿರ್ಮಾಪಕ ಕಲೈಪುಲಿ ಎಸ್​. ಧಾನು ಅವರು ಮ್ಯಾಕ್ಸ್​ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಿಜಯ್​ ಕಾರ್ತಿಕೇಯ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಿನಿಮಾಗೆ ಬಹುತೇಕ ಶೂಟಿಂಗ್​ ನಡೆಯಿತು. ಚಿತ್ರೀಕರಣ ಮುಗಿದ ನಂತರ ಸುದೀಪ್​ ಅವರು ಆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.  

ಕಳೆದ ವರ್ಷ ಕಿಚ್ಚ ಸುದೀಪ್​ ಅವರ ಜನ್ಮದಿನಕ್ಕೆ ಇಂಟರೆಸ್ಟಿಂಗ್​ ಟೀಸರ್​ ಅನಾವರಣ ಮಾಡಲಾಗಿತ್ತು. ಅದಕ್ಕೂ ಮುನ್ನ ಬಿಡುಗಡೆ ಆಗಿದ್ದ ಪ್ರೋಮೋ ಕೂಡ ಸಖತ್​ ಸದ್ದು ಮಾಡಿತ್ತು. ಇಷ್ಟೆಲ್ಲ ಕಾತರ ಮೂಡಿಸಿರುವ ಈ ಸಿನಿಮಾದಲ್ಲಿ ಸುದೀಪ್​ ಅವರು ಸಖತ್ ಮಾಸ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 16ಕ್ಕೆ ಬರಲಿರುವ ಟೀಸರ್​ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

ಇದು ಸುದೀಪ್​ ನಟನೆಯ 46ನೇ ಸಿನಿಮಾ. ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಅವರು ಸಂಗೀತ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಹತ್ಯೆ ನಡೆದ ತಿಂಗಳ ಬಳಿಕ ದರ್ಶನ್ ಮನೆ ಕೆಲಸದವರ ಹೇಳಿಕೆ ಪಡೆದ ಖಾಕಿ