ಮುಂಬೈ : ಬಾಲಿವುಡ್ ನ ಹಲವು ಚಿತ್ರಗಳಲ್ಲಿ ನಟಿಸಿದ ಪಾಕ್ ನಟಿ ಸಬಾ ಕಮರ್ ಅವರು ವಿವಾಹವಾಗಲು ಸಜ್ಜಾಗಿದ್ದು, ಆದರೆ ಕೊನೆಯ ಗಳಿಗೆಯಲ್ಲಿ ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾರಂತೆ.
									
										
								
																	
ನಟಿ  ಸಬಾ ಕಮರ್ ಅವರು ಉದ್ಯಮಿ ಅಜೀಮ್ ಖಾನ್ ಅವರೊಂದಿಗೆ ವಿವಾಹವಾಗಲು ಸಜ್ಜಾಗಿದ್ದರು. ಆದರೆ ಇದೀಗ ವೈಯಕ್ತಿಕ ಕಾರಣಗಳಿಂದ ನಟಿ ಮದುವೆ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
									
						                     
							
							
			        							
								
																	ಕಾರಣವೇನೆಂದರೆ ನಟಿ ಸಬಾ ಕಮರ್ ನಿಶ್ಚಿತಾರ್ಥ ಮಾಡಿಕೊಂಡ ಕೆಲವು ದಿಬಗಳ ಬಳಿಕ ಮಹಿಳೆಯೊಬ್ಬಳು ಅಜೀಮ್ ಖಾನ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ. ಹೀಗಾಗಿ ನಟಿ ಈ ಮದುವೆ ರದ್ದುಗೊಳಿಸಿರುವುದಾಗಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.