Webdunia - Bharat's app for daily news and videos

Install App

ಕಿಚ್ಚ ಸುದೀಪ್ ಗೆ ಬೈದ ಅಭಿಮಾನಿ: ಲೈವ್ ಬಂದು ತಿರುಗೇಟು ಕೊಟ್ಟ ನಿರ್ದೇಶಕ ನಂದಕಿಶೋರ್

Webdunia
ಸೋಮವಾರ, 4 ಜುಲೈ 2022 (09:45 IST)
ಬೆಂಗಳೂರು: ಕಿಚ್ಚ ಸುದೀಪ್ ಆನ್ ಲೈನ್ ಗೇಮ್ ನ ಜಾಹೀರಾತೊಂದರ ರಾಯಭಾರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಿಚಾರಕ್ಕೆ ಸಾಕಷ್ಟು ಬಾರಿ ಅವರು ವಿವಾದಕ್ಕೊಳಗಾಗಿದ್ದು ಇದೆ.

ಇದೀಗ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ರನ್ನು ವಾಚಮಗೋಚರವಾಗಿ ನಿಂದಿಸಿದ್ದಾನೆ. ಆನ್ ಲೈನ್ ಗೇಮ್ ನ ಗೀಳಿಗೆ ಬಿದ್ದ ಅಪ್ಪ, ಮಗನನ್ನೇ ಕೊಲೆ ಮಾಡಿದ ಸುದ್ದಿಯನ್ನು ಓದಿದೆ. ಕಿಚ್ಚ ಸುದೀಪ್ ನಂತಹ ನಟರು ಇಂತಹ ಆನ್ ಲೈನ್ ಗೇಮ್ ನನ್ನು ಪ್ರಚಾರ ಮಾಡುವುದರಿಂದಲೇ ಇಂತಹ ಅನಾಹುತಗಳು ನಡೆಯುತ್ತಿವೆ. ಕಿಚ್ಚ ಸುದೀಪ ನೀನು ಮಾತ್ರ ಅಲ್ಲ ನಿನ್ನ ಅಭಿಮಾನಿಗಳೂ ಷಂಡರು ಎಂದು ಹೀನಾಯವಾಗಿ ಮಾತನಾಡಿದ್ದಾನೆ.

ಈ ವಿಡಿಯೋ ಕಿಚ್ಚನ ಅಭಿಮಾನಿಗಳನ್ನು ಕೆರಳಿಸಿದೆ. ಕಿಚ್ಚ ಸುದೀಪ್ ಅಭಿಮಾನಿಯೂ ಆಗಿರುವ ನಿರ್ದೇಶಕ ನಂದಕಿಶೋರ್ ಲೈವ್ ಬಂದು ಈ ಯುವಕನಿಗೆ ಜಾಡಿಸಿದ್ದಾರೆ. ಸುದೀಪ್ ಕನ್ನಡದ ಮೇರು ನಟ. ಅವರಿಂದಾಗಿ ಎಷ್ಟೋ ಜನರಿಗೆ ಸಹಾಯವಾಗಿದೆ. ಸುದೀಪ್ ರಿಂದಲೇ ಆ ಹುಡುಗನ ಸಾವಾಗಿದೆ ಎಂದು ಯಾರಾದರೂ ದೂರು ಕೊಟ್ಟಿದ್ದಾರೆಯೇ? ವಿನಾಕಾರಣ ಸುದೀಪ್ ಬಗ್ಗೆ ಹೀನಾಯವಾಗಿದ್ದು ಮಾತನಾಡಿದ್ದಕ್ಕೆ ನಿನಗೆ ನಾಚಿಕೆಯಾಗಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Annaiah serial: ತೆರೆ ಮೇಲೆ ನಡೀತು ಶಿವು, ಪಾರು ಫಸ್ಟ್ ನೈಟ್, ಅಯ್ಯೋ ಶಿವನೇ ಎಂದ ವೀಕ್ಷಕರು

ಕಿಚ್ಚ ಸುದೀಪ್ ಬರ್ತ್ ಡೇ: ಕಿಚ್ಚನ ಈ ಒಂದು ಅಭ್ಯಾಸ ಎಲ್ಲರಿಗೂ ಮಾದರಿ

ದರ್ಶನ್ ಜತೆಗಿನ ಮುನಿಸಿನ ಬಗ್ಗೆ ಓಪನ್ ಆಗಿ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್‌

ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಕೊಟ್ರು ಖಡಕ್ ರಿಪ್ಲೈ

ಏನಾದ್ರೂ ಸರಿ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರೋದು: ಕಿಚ್ಚ ಸುದೀಪ್ ಖಡಕ್ ಮಾತು

ಮುಂದಿನ ಸುದ್ದಿ
Show comments