Webdunia - Bharat's app for daily news and videos

Install App

ಸೈಕೋಪಾತ್ ಆಗಿ ಬದಲಾಗಲಿದ್ದಾರೆ ಸೂಪರ್ ಸ್ಟಾರ್ ಮಮ್ಮುಟ್ಟಿ: ಏನಿದು ಕಹಾನಿ ಇಲ್ಲಿದೆ ಸ್ಟೋರಿ

Krishnaveni K
ಗುರುವಾರ, 3 ಅಕ್ಟೋಬರ್ 2024 (10:54 IST)
ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸೈಕೋಪಾತ್ ಆಗಿ ಬದಲಾಗಲಿದ್ದಾರೆ. ಇದುವರೆಗೂ ವೈವಿದ್ಯಮಯ ಪಾತ್ರ ಮಾಡುತ್ತಾ ಬಂದಿದ್ದ ಮಮ್ಮುಟ್ಟಿ ಈಗ ಮುಂಬರುವ ಸಿನಿಮಾದಲ್ಲಿ ಸೈಕೋಪಾತ್ (ಮನೋರೋಗಿ) ಆಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಮಮ್ಮುಟ್ಟಿಕಂಪನಿ ನಿರ್ಮಾಣದಲ್ಲಿ ದುಲ್ಕರ್ ಸಲ್ಮಾನ್ ಗೆ ಕುರುಪ್ ಸಿನಿಮಾ ಕತೆ ಬರೆದಿದ್ದ ಜಿತಿನ್ ಕೆ ಜೋಸ್ ಚೊಚ್ಚಲ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಸಹ ನಟ ವಿನಾಯಕನ್ ಜೊತೆಗೆ ಮಮ್ಮುಟ್ಟಿ ಫೇಸ್ ಬುಕ್ ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು.

ಹೀಗಾಗಿ ಈ ಸಿನಿಮಾ ಶೂಟಿಂಗ್ ಕೂಡಾ ಆರಂಭವಾಗಿರುವುದು ಪಕ್ಕಾ ಆಗಿದೆ. ಆದರೆ ಸಿನಿಮಾ ಬಗ್ಗೆ ಇನ್ನೂ ಚಿತ್ರತಂಡ ಅಧಿಕೃತ ಘೋಷಣೆ ಮಾಡಿಲ್ಲ. ಇತ್ತೀಚೆಗೆ ಮಮ್ಮುಟ್ಟಿ ವೈವಿದ್ಯಮಯ ಕಥಾಪಾತ್ರದ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಡೆಯುತ್ತಿದ್ದಾರೆ. ಅದರಲ್ಲೂ ನೆಗೆಟಿವ್ ಶೇಡ್ ಇರುವ ಪಾತ್ರಗಳನ್ನೂ ಜನ ಇಷ್ಟಪಡುತ್ತಿದ್ದಾರೆ.

ಈ ಸಿನಿಮಾದಲ್ಲೂ ಅಂತಹದ್ದೇ ಕತೆಯಿದೆ ಎನ್ನಲಾಗಿದೆ. ಇತ್ತೀಚೆಗೆ ಬಂದ ಅವರ ಭ್ರಮಯುಗಂ, ಪುಳು, ರೋಷಾಚ್ ಎನ್ನುವ ಸಿನಿಮಾಗಳ ಕತೆ ಒಂದಕ್ಕಿಂತ ಒಂದು ಭಿನ್ನವಾಗಿತ್ತು. ಇದೂ ಕೂಡಾ ಅಂತಹದ್ದೇ ವ್ಯತ್ಯಸ್ಥ ಕತೆ ಹೊಂದಿದ್ದು ಜಿಷ್ಣು ಶ್ರೀ ಕುಮಾರ್ ಚಿತ್ರಕತೆ ಬರೆದಿದ್ದಾರೆ.

ಮಮ್ಮುಟ್ಟಿ ಕಂಪನಿಯಿಂದ ನಿರ್ಮಾಣವಾಗುತ್ತಿರುವ 7 ನೇ ಸಿನಿಮಾ ಇದಾಗಿರಲಿದೆ. ಈ ಸಿನಿಮಾವನ್ನು ದುಲ್ಕರ್ ಸಲ್ಮಾನ್ ಅವರೇ ವಿತರಿಸಲಿದ್ದಾರೆ. ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments