BBK11: ಬಿಗ್ ಬಾಸ್ ನ್ನೇ ಎಕ್ಸ್ ಪೋಸ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ ಲಾಯರ್ ಜಗದೀಶ್ (Video)

Krishnaveni K
ಗುರುವಾರ, 3 ಅಕ್ಟೋಬರ್ 2024 (09:58 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಲಾಯರ್ ಜಗದೀಶ್ ಯಾಕೋ ಸಹ ಸ್ಪರ್ಧಿಗಳಿಗೆ ಮಾತ್ರವಲ್ಲ, ಸ್ವತಃ ಬಿಗ್ ಬಾಸ್ ಗೇ ತಲೆನೋವಾಗುವ ಲಕ್ಷಣ ಕಾಣುತ್ತಿದೆ. ನಿನ್ನೆಯ ಎಪಿಸೋಡ್ ಫುಲ್ ಸ್ಪರ್ಧಿಗಳ ಜೊತೆ ಕಿತ್ತಾಡಿದ್ದ ಜಗದೀಶ್ ಈಗ ಬಿಗ್ ಬಾಸ್ ಗೇ ಬೆದರಿಕೆ ಹಾಕಿದ್ದಾರೆ.

ನಿನ್ನೆಯ ಟಾಸ್ಕ್ ನಲ್ಲಿ ಧನರಾಜ್ ಆಚಾರ್ ರನ್ನು ಕಾಮಿಡಿ ಪೀಸ್ ಎಂದಿದ್ದ ಜಗದೀಶ್ ಬಳಿಕ ಅವರ ದೇಹ ಗಾತ್ರದ ಬಗ್ಗೆಯೂ ತಮಾಷೆ ಮಾಡಿದ್ದರು. ಬಿಗ್ ಬಾಸ್ ನಿಯಮಗಳನ್ನು ಮುರಿದು ಊಟವನ್ನೂ ಕಳೆದುಕೊಂಡ ಬಳಿಕ ಮನೆಯವರೆಲ್ಲರೂ ಅವರ ಮೇಲೆ ಬೇಸರಗೊಂಡಿದ್ದಾರೆ.

ಇದೇ ಬೇಸರದಲ್ಲಿ ಮನೆಯ ಎಲ್ಲಾ ಸದಸ್ಯರೊಡನೆ ಕಿತ್ತಾಟವಾಡಿದ್ದಾರೆ. ಧನರಾಜ್ ಆಚಾರ್ ಬಳಿಕ ಮಾನಸಾಗೂ ಆಕ್ಷೇಪಾರ್ಹವಾಗಿ ಮಾತನಾಡಿದ್ದ ಜಗದೀಶ್ ಯಾವ ಸೀಮೆ ಹೆಂಗ್ಸು ಎಂದಿದ್ದು ಮನೆಯ ಇತರೆ ಸದಸ್ಯರೂ ಕೆರಳುವಂತೆ ಮಾಡಿತು. ಈ ವೇಳೆ ಎಲ್ಲಾ ಸದಸ್ಯರೂ ಅವರ ಮೇಲೆ ಮುಗಿಬಿದ್ದರು.

ಇಂದಿನ ಎಪಿಸೋಡ್ ನಲ್ಲಿ ಜಗದೀಶ್ ಬಿಗ್ ಬಾಸ್ ಗೇ ಧಮ್ಕಿ ಹಾಕಿದ್ದಾರೆ. ನನ್ನನ್ನು ಆಚೆ ಕಳುಹಿಸಿ ನೋಡೋಣ, ನಿಮ್ಮ ಎಲ್ಲಾ ಸೀಕ್ರೆಟ್ ಎಕ್ಸ್ ಪೋಸ್ ಮಾಡ್ತೀನಿ, ನಾನು ಮನಸ್ಸು ಮಾಡಿದ್ರೆ ಈ ಕ್ಷಣ ಇಲ್ಲಿಗೆ ಹೆಲಿಕಾಪ್ಟರ್ ತರಿಸಬಹುದು, ಮನೆಯ ಈ ಬಾಗಿಲು ಒಡೆದು ಹಾಕಬಹುದು ಎಂದೆಲ್ಲಾ ಕ್ಯಾಮರಾ ಮುಂದೆ ನಿಂತು ಆವಾಜ್ ಹಾಕಿದ್ದಾರೆ. ಜಗದೀಶ್ ಕಿರಿಕ್ ಗಳನ್ನು ನೋಡಿ ನೆಟ್ಟಿಗರು ಈ ವಾರ ಖಂಡಿತಾ ಕಿಚ್ಚ ಸುದೀಪ್ ರಿಂದ ಇವರಿಗಿದೆ ಹಬ್ಬ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments