Publish Date: Thu, 02 Jun 2022 (16:04 IST)
Updated Date: Thu, 02 Jun 2022 (16:09 IST)
ಬೆಂಗಳೂರು: ಕೆಲವು ಕಾಲ ಸಿನಿಮಾಗಳಿಂದ ದೂರವೇ ಉಳಿದಿದ್ದ ನಟಿ ಮಾಲಾಶ್ರೀ ಈಗ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಆಕ್ಷನ್ ಕ್ವೀನ್ ಈಗ ಮತ್ತೆ ಅಂತಹದ್ದೇ ಒಂದು ಸಬ್ಜೆಕ್ಟ್ ನ ಸಿನಿಮಾದೊಂದಿಗೆ ಬರಲಿದ್ದಾರೆ. ಇದಕ್ಕೆ ನೈಟ್ ಕರ್ಫ್ಯೂ ಎಂದು ಟೈಟಲ್ ಇಡಲಾಗಿದೆ. ಅದರ ಪೋಸ್ಟರ್ ಬಿಡುಗಡೆಯಾಗಿದ್ದು, ಮಾಲಾಶ್ರೀ ಜೊತೆಗೆ ರಂಜಿನಿ ರಾಘವನ್, ಪ್ರಮೋದ್ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು ಸೇರಿದಂತೆ ಪ್ರತಿಭಾವಂತರ ತಾರಾಗಣವೇ ಇದೆ.
ಲಾಕ್ ಡೌನ್ ಸಮಯದಲ್ಲಿ ನಡೆದ ಸತ್ಯ ಘಟನೆಯನ್ನಾಧರಿಸಿ ಮಾಡಿರುವ ಕತೆಯಿದು ಎಂದಿದೆ ಚಿತ್ರತಂಡ. ರವೀಂದ್ರ ವಂಶಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.