Select Your Language

Notifications

webdunia
webdunia
webdunia
webdunia

ರಾಜಮೌಳಿ ಜೊತೆ ಸಿನಿಮಾಗೆ ಮಹೇಶ್ ಬಾಬುಗೆ ಜರ್ಮನಿಯಲ್ಲಿ ಟ್ರೈನಿಂಗ್!

Mahesh Babu
ಹೈದರಾಬಾದ್: ಗುಂಟೂರು ಖಾರಂ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಇದೀಗ ಜರ್ಮನಿ ದೇಶಕ್ಕೆ ತೆರಳಿದ್ದಾರೆ. ಇದಕ್ಕೆ ಕಾರಣವೂ ಇದೆ.

ಇತ್ತೀಚೆಗಷ್ಟೇ ಮಹೇಶ್ ಬಾಬು ತಮ್ಮ ಚಿತ್ರತಂಡದೊಂದಿಗೆ ಗುಂಟೂರು ಖಾರಂ ಸಿನಿಮಾ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ಅದರ ಬೆನ್ನಲ್ಲೇ ಅವರೀಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ.

ಸಾಮಾನ್ಯವಾಗಿ ಒಂದು ಸಿನಿಮಾ ಮುಗಿಸಿದ ಬಳಿಕ ಮಹೇಶ್ ಬಾಬು ಕುಟುಂಬ ಸಮೇತರಾಗಿ ಪ್ರವಾಸ ತೆರಳುತ್ತಾರೆ. ಆದರೆ ಈ ಬಾರಿ ಏಕಾಂಗಿಯಾಗಿ ವಿದೇಶ ಪ್ರವಾಸ ಮಾಡಿದ್ದಾರೆ. ಇದಕ್ಕೆ ಕಾರಣ ರಾಜಮೌಳಿ ಜೊತೆಗಿನ ಅವರ ಮುಂದಿನ ಸಿನಿಮಾ.

ಜರ್ಮನಿಯಲ್ಲಿ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕೆ ಸಂಬಂಧಪಟ್ಟಂತೆ ತಾಂತ್ರಿಕವಾಗಿ ಕಲಿಯಲು ಮಹೇಶ್ ಜರ್ಮನಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ರಾಜಮೌಳಿ ಜೊತೆ ಸಾಹಸಮಯ ಸಿನಿಮಾವೊಂದನ್ನು ಮಹೇಶ್ ಬಾಬು ಮಾಡಲಿದ್ದಾರೆ. ಈ ಸಿನಿಮಾವನ್ನು ಹಾಲಿವುಡ್ ರೇಂಜ್ ಗೆ ನಿರ್ಮಿಸಲು ರಾಜಮೌಳಿ ತಯಾರಿ ನಡೆಸಿದ್ದಾರೆ. ಹೀಗಾಗಿ ಅದಕ್ಕೆ ತಯಾರಿ ಮಾಡಲು ಮಹೇಶ್ ಬಾಬು ಜರ್ಮನಿಗೆ ತೆರಳಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬಕ್ಕೆ ತಿಂಗಳ ಮೊದಲೇ ಸೆಲೆಬ್ರಿಟಿಸ್ ಗೆ ದರ್ಶನ್ ಮನವಿ