Select Your Language

Notifications

webdunia
webdunia
webdunia
webdunia

ಲವ್ ಇರೋದು ನಿಜ, ಗುಟ್ಟಾಗಿ ಮದುವೆ ಎಲ್ಲಾ ಸುಳ್ಳು ಎಂದ ಶೃತಿ

ಲವ್ ಇರೋದು ನಿಜ, ಗುಟ್ಟಾಗಿ ಮದುವೆ ಎಲ್ಲಾ ಸುಳ್ಳು ಎಂದ ಶೃತಿ
ಬೆಂಗಳೂರು , ಬುಧವಾರ, 6 ಸೆಪ್ಟಂಬರ್ 2017 (11:36 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಗುಟ್ಟಾಗಿ ಮದುವೆಯಾಗಿದ್ದಾರೆ  ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಆದರೆ ಅದಕ್ಕೆ ಇದೀಗ ಸ್ವತಃ ಶೃತಿ ಸ್ಪಷ್ಟನೆ ಕೊಟ್ಟಿದ್ದಾರೆ.

 
ಮದುವೆಯಾಗಿದ್ದೇನೆ ಎಂಬ ಸುದ್ದಿಯೆಲ್ಲಾ ಸುಳ್ಳು. ಆದರೆ ತಾನು ಲವ್ವಲ್ಲಿ ಬಿದ್ದಿರುವುದು ನಿಜ ಎಂದು ಶೃತಿ ಹೇಳಿದ್ದಾರೆ. ನಾನು ಮದುವೆಯಾಗಿದ್ದೇನೆ ಎನ್ನಲಾಗಿರುವ ರಾಮ್ ಕುಮಾರ್ ನನಗೆ ಮೊದಲಿನಿಂದಲೂ ಗೊತ್ತು.

ಆದರೆ ಅವರ ಜತೆ ಈಗಾಗಲೇ ಮದುವೆಯಾಗಿದೆ ಎನ್ನುವುದೆಲ್ಲಾ ಸುಳ್ಳು. ಸದ್ಯಕ್ಕೆ ಮದುವೆಯಾಗುವ ಯೋಜನೆಯಿಲ್ಲ. ನಾನು ಒಬ್ಬರನ್ನು ಪ್ರೀತಿಸುತ್ತಿರುವುದು ನಿಜ. ಆದರೆ ಅವರು ನೃತ್ಯ ನಿರ್ದೇಶಕರಲ್ಲ. ಅಷ್ಟಕ್ಕೂ ಇದೆಲ್ಲಾ ನನ್ನ ಪರ್ಸನಲ್ ವಿಷ್ಯ ಎಂದು ಶೃತಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ.. ಅಕ್ಕನ ಸಾವಿನ ಬಗ್ಗೆ ಸಹೋದರ ಇಂದ್ರಜಿತ್ ಲಂಕೇಶ್ ಹೇಳಿದ್ದೇನು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಅಗ್ನಿಸಾಕ್ಷಿ’ ಸ್ವಾಮೀಜಿ, ನಟ ಸುದರ್ಶನ್ ಗೆ ಗಾಯ