Select Your Language

Notifications

webdunia
webdunia
webdunia
webdunia

ಸ್ಟಾರ್ ನಟರ ಜೊತೆ ಚಿತ್ರ ಮಾಡಲು ಹೊರಟ ನಿರ್ದೇಶಕ ಲೋಕೇಶ್ ಕನಗರಾಜ್

ಸ್ಟಾರ್ ನಟರ ಜೊತೆ ಚಿತ್ರ ಮಾಡಲು ಹೊರಟ ನಿರ್ದೇಶಕ ಲೋಕೇಶ್ ಕನಗರಾಜ್
ಚೆನ್ನೈ , ಮಂಗಳವಾರ, 16 ಫೆಬ್ರವರಿ 2021 (12:18 IST)
ಚೆನ್ನೈ : ತಮಿಳು ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ‘ ಮಾಸ್ಟರ್’ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಇದೀಗ ಕಾಲಿವುಡ್ ನ ಖ್ಯಾತ ನಿರ್ದೆಶಕರೆನಿಸಿಕೊಂಡಿದ್ದ ಅವರು ಈಗ ಸತತವಾಗಿ ಸ್ಟಾರ್ ಹೀರೋಗಳ ಜೊತೆಗೆ ಚಿತ್ರ ಮಾಡಲು ಮುಂದಾಗಿದ್ದಾರೆ. ಎನ್ನಲಾಗಿದೆ.

ಲೋಕೇಶ್ ಕನಗರಾಜ್ ಅವರು ನಿರ್ದೇಶಿಸಿದ್ದ ಮೂರು ಚಿತ್ರಗಳು ಸೂಪರ್ ಹಿಟ್ ಆಗಿದೆ. ಬಳಿಕ ನಾಲ್ಕನೇ ಚಿತ್ರವನ್ನು ಸ್ಟಾರ್ ಟ ಕಮಲ್ ಹಾಸನ್ ಜೊತೆ ನಿರ್ಮಿಸುತ್ತಿದ್ದರು. ಆದರೆ ಕಮಲ್ ಹಾಸನ್ ಶಸ್ತ್ರಚಿಕಿತ್ಸೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿದ್ದ ಕಾರಣ ಈ ಚಿತ್ರ ಸದ್ಯಕ್ಕೆ ಸ್ಥಗಿತಗೊಂಡಿದೆ.

ಹಾಗಾಗಿ ಅವರು ಇದೀಗ ತಮ್ಮ ಮುಂದಿನ ಚಿತ್ರದ ಬಗ್ಗೆ ಚರ್ಚೆ ನಡೆಸುತ್ತಿದ್ದು, ಕಮಲ್ ಹಾಸನ ಅವರ ಚಿತ್ರ ಪ್ರಾರಂಭವಾಗುವುದರೊಳಗೆ ಮುಂದಿನ ಚಿತ್ರಮುಗಿಸುವ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ. ಕಾಲಿವುಡ್ ವಲಯದ ಮಾಹಿತಿ ಪ್ರಕಾರ ನಟ ವಿಜಯ್ ಸೇತುಪತಿಯ ಜೊತೆ ಚಿತ್ರ ಮಾಡಲಿದ್ದಾರೆ ಎನ್ನಲಾಗಿದೆ.    

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಗೆ ಎಂಟ್ರಿ ಕೊಡಲಿರುವ ಯುವ ನಾಯಕ ಬೆಲ್ಲಕೊಂಡ ಸಾಯಿ ಶ್ರೀನಿವಾಸ್