ರಿಷಬ್ ಶೆಟ್ಟಿಗೆ ಪುಟ್ಟಣ್ಣ ಕಣಗಾಲ್ ಪತ್ನಿ ಕೊಟ್ಟ ಆ ಅಮೂಲ್ಯ ಗಿಫ್ಟ್ ಏನು ಗೊತ್ತಾ?

ಮಂಗಳವಾರ, 3 ಡಿಸೆಂಬರ್ 2019 (09:01 IST)
ಬೆಂಗಳೂರು: ಕಥಾ ಸಂಗಮ ಸಿನಿಮಾ ಇನ್ನೇನು ರಿಲೀಸ್ ಗೆ ಸಜ್ಜಾಗಿದ್ದು, ಇದಕ್ಕೂ ಮೊದಲು ರಿಷಬ್ ಶೆಟ್ಟಿ ತಮ್ಮ ಸಿನಿಮಾವನ್ನು ಸಿನಿ ದಿಗ್ಗಜರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.


ಈ ಸಿನಿಮಾ ಮಾಡಲು ತಮಗೆ ಪುಟ್ಟಣ್ಣ ಕಣಗಾಲ್ ಸ್ಪೂರ್ತಿಯೆಂದು ಅನೇಕ ಬಾರಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಇದೇ ಕಾರಣಕ್ಕೆ ಪುಟ್ಟಣ್ಣ ಕಣಗಾಲ್ ಪತ್ನಿ ಲಕ್ಷ್ಮಿ ಕಣಗಾಲ್ ರಿಂದಲೇ ಟ್ರೈಲರ್ ಬಿಡುಗಡೆ ಮಾಡಿಸಿದ್ದರು.

ಇದೀಗ ಸಿನಿಮಾದ ವಿಶೇಷ ಪ್ರದರ್ಶನಕ್ಕೆ ಬಂದ ಲಕ್ಷ್ಮಿ ಪುಟ್ಟಣ್ಣ ಕಣಗಾಲ್ ರಿಷಬ್ ಶೆಟ್ಟರಿಗೆ ಒಂದು ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಅದು ಪುಟ್ಟಣ್ಣ ತೊಡುತ್ತಿದ್ದ ಟೈ. ಇದನ್ನು ಉಡುಗೊರೆಯಾಗಿ ಪಡೆದ ರಿಷಬ್ ಖುಷಿಯಿಂದಲೇ ಈ ವಿಚಾರವನ್ನು ಫೋಟೋ ಸಮೇತ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 19 ಏಜ್ ಈಸ್ ನಾನ್ಸೆನ್ಸ್: ಹರೆಯದ ಹುರುಪಿಗೆ ಸಾಹಸ ಸ್ಪರ್ಶ!