Webdunia - Bharat's app for daily news and videos

Install App

'ಭೀಮ' ಸಿನಿಮಾದ ಖಡಕ್ ಇನ್ಸ್‌ಸ್ಪೆಕ್ಟರ್‌ 'ಗಿರಿಜಾ'ಗೆ ಕಣ್ಣೀರು ಹಾಕಿಸಿದ 'ಲಕ್ಷಣ' ಸೀರಿಯಲ್ ಗೆಳತಿಯರು

Sampriya
ಸೋಮವಾರ, 19 ಆಗಸ್ಟ್ 2024 (16:30 IST)
Photo Courtesy X
ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ' ಸಿನಿಮಾಗೆ ಪ್ಷೇಕ್ಷಕರು ಫಿದಾ ಆಗಿದ್ದು, ಚಿತ್ರಮಂದಿರಗಳ್ಲಲಿ 'ಭೀಮ' ಓಟ ಬಲು ಜೋರಾಗಿದೆ.

ಇನ್ನೂ ಸಿನಿಮಾ ನೋಡಿದ ಮಂದಿ ಇನ್ಸ್‌ಸ್ಪೆಕ್ಟರ್‌ ಗಿರಿಜಾ ಪಾತ್ರಧಾರಿ ಪ್ರಿಯಾ ಶತಮರ್ಶನ್ ಅವರ ಅಭಿನಯಕ್ಕೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿದೆ.

ಭೀಮದಲ್ಲಿ ನಟಿ ಪ್ರಿಯಾ ಶತಮರ್ಶನ್ ಅವರು ಖಡಕ್ ಪೊಲೀಸ್ ಇನ್ಸ್‌ಸ್ಪೆಕ್ಟರ್‌ ಆಗಿ ಕಾಣಿಸಿಕೊಂಡಿದ್ದು, ಇವರ ಅಭಿನಯ ನೆಕ್ಸ್‌ ಲೆವೆಲ್ ಎಂದು ಕೊಂಡಾಡುತ್ತಿದ್ದಾರೆ. ಈ ಸಿನಿಮಾದಿಂದ ಇನ್ನಷ್ಟು ಒಳ್ಳೆಯ ಅವಕಾಶಗಳು ಬರಲಿ ಎಂದು ಹಾರೈಸುತ್ತಿದ್ದಾರೆ.

ರಾಜ್ಯದಾದ್ಯಂತ ಭೀಮ ಹೌಸ್‌ಫುಲ್ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ಬೆನ್ನಲ್ಲೇ ಪ್ರಿಯಾ ಶತಮರ್ಶನ್ ಅವರಿಗೆ ಸ್ನೇಹಿತರು ಸರ್ಪ್ರೈಸ್ ಪಾರ್ಟಿ ಕೊಟ್ಟಿದ್ದಾರೆ. ಇದನ್ನು ನೋಡಿದ ಅವರು ಕಣ್ಣೀರು ಹಾಕಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷಣ ಸೀರಿಯಲ್‌ನಲ್ಲಿ ಪ್ರಿಯಾ ಅವರು ಅಭಿನಯಿಸಿದ್ದರು. ಈ ಸೀರಿಯಲ್‌ನ ನಟಿಯರಾದ ವಿಜಯಲಕ್ಷ್ಮೀ, ಶ್ರುತಿ ರಮೇಶ್ ಮತ್ತು ಸುಕೃತಾ ನಾಗ್ ಅವರು ಪ್ರಿಯಾ ಅಭಿನಯಕ್ಕೆ ಮೆಚ್ಚಿ ಪಾರ್ಟಿ ಕೊಟ್ಟಿದ್ದಾರೆ. ಅದಲ್ಲದೆ ಇವರೆಲ್ಲರು ಒಟ್ಟಿಗೆ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಆನಂದಿಸಿದ್ದಾರೆ.

ಇನ್ನೂ ಸ್ನೇಹಿತರು ಕೊಟ್ಟ ಪಾರ್ಟಿ ನೋಡಿ ಪ್ರಿಯಾ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋವನ್ನು ಶ್ರುತಿ ರಮೇಶ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್‌ಸ್ಪೆಕ್ಟರ್‌ ಗಿರಿಜಾಗೆ ಜೈ, ನೀವು ನಮ್ಮಗೆ ಹೆಮ್ಮೆ ತಂದಿದ್ದೀರಿ ಪ್ರಿಯಾ, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.




<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments