Select Your Language

Notifications

webdunia
webdunia
webdunia
webdunia

ನಮ್ಮದು ರಾಮ ಜನ್ಮಭೂಮಿ: ಗರಂ ಆದ ಧ್ರುವ ಸರ್ಜಾ

Dhruva Sarja

Krishnaveni K

ಬೆಂಗಳೂರು , ಸೋಮವಾರ, 19 ಆಗಸ್ಟ್ 2024 (16:10 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್ ಬಿಡುಗಡೆ ಸಂದರ್ಭದಲ್ಲೇ ನಮ್ಮದು ರಾಮ ಜನ್ಮಭೂಮಿ, ಇಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು ಎಂದು ಗರಂ ಆಗಿ ಹೇಳಿದ್ದಾರೆ.

ಮಾರ್ಟಿನ್ ಬಿಡುಗಡೆಯ ತಯಾರಿಯಲ್ಲಿರುವ ಧ್ರುವ ಸರ್ಜಾ ಈ ರೀತಿ ಮಾಡಿರುವುದು ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ. ಕೋಲ್ಕತ್ತಾದಲ್ಲಿ ಇತ್ತೀಚೆಗೆ ಟ್ರೈನಿ ವೈದ್ಯೆಯ ಮೇಲೆ ಕ್ರೂರವಾಗಿ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಈ ಘಟನೆಯನ್ನು ಖಂಡಿಸಿ ಧ್ರುವ ಸರ್ಜಾ ಮಾತನಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಧ್ರುವ ಸರ್ಜಾ, ‘ಮಾರ್ಟಿನ್ ಸಿನಿಮಾವನ್ನು ಪಕ್ಕಕ್ಕಿಟ್ಟು ಈವತ್ತು ಒಂದು ವಿಚಾರದ ಬಗ್ಗೆ ಮಾತನಾಡೋಣ. ಭಾರತದಲ್ಲಿ  ಇತ್ತೀಚೆಗಿನ ಅಂಕಿ ಅಂಶ ಪ್ರಕಾರ ಪ್ರತೀ 16 ನಿಮಿಷಕ್ಕೆ ಒಬ್ಬ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಎಲ್ಲಿ ಹೆಣ್ಣು ಮಕ್ಕಳಿಗೆ ಗೌರವ, ಮರ್ಯಾದೆ ಇರುವುದಿಲ್ಲವೋ ಅಲ್ಲಿ ಭಗವಂತನೂ ಇರಲ್ಲ’ ಎಂದಿದ್ದಾರೆ.

ಇನ್ನೂ ಮುಂದುವರಿದು, ‘ನಮ್ಮದು ರಾಮಜನ್ಮಭೂಮಿ. ಕೆಲವರು ಮಾಡುವ ಕೆಲಸದಿಂದ ಭಾರತಕ್ಕೆ ಕೆಟ್ಟ ಹೆಸರು. ಹೆಣ್ಣು ಮಕ್ಕಳಿಗೆ ಮಾತ್ರ ಹಾಗಿರಿ, ಹೀಗಿರಿ ಎಂದು ಅಂತ ಹೇಳುವುದಕ್ಕಿಂತ ಒಬ್ಬ ಹುಡುಗನನ್ನು ಬೆಳೆಸುವಾಗ ಮೂರು ವಿಷಯವನ್ನು ಕಡ್ಡಾಯವಾಗಿ ಹೇಳಿಕೊಡಬೇಕು. ಹೆಣ್ಣು ಮಕ್ಕಳನ್ನು ಹೇಗೆ ರಕ್ಷಿಸಬೇಕು, ಹೇಗೆ ಬೆಂಬಲಿಸಬೇಕು ಮತ್ತು ಹೇಗೆ ಗೌರವಿಸಬೇಕು ಎಂಬುದನ್ನು ಕಡ್ಡಾಯವಾಗಿ ಹೇಳಿ ಕೊಡಬೇಕು. ಇಂಥಾ ರೇಪಿಸ್ಟ್ ಗಳಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಅಂಥವರಿಗೆ ಎಂಥಾ ಕಠಿಣ ಶಿಕ್ಷೆ ಕೊಟ್ಟರೂ ಸಾಕಾಗಲ್ಲ. ನನ್ಮಕ್ಕಳನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಸುಟ್ಟು ಹಾಕಿದರೂ ಸಮಾಧಾನವಾಗಲ್ಲ ಯಾರಿಗೋ ಅನ್ಯಾಯವಾಗಿದೆ ಎಂದಾಗ ನಾವು ಅವರ ಜೊತೆ ಇರಬೇಕು. ದಯವಿಟ್ಟು ಎಲ್ಲರೂ ಧ್ವನಿಯೆತ್ತಿ ನ್ಯಾಯ ಕೇಳೋಣ’ ಎಂದು ಧ್ರುವ ವಿಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐ ಲವ್‌ ಯೂ ಅಣ್ಣ, ನಟ ದರ್ಶನ್‌ಗೆ ರಕ್ಷಾ ಬಂಧನದ ಶುಭಕೋರಿದ ನಟಿ ಸೋನಾಲ್ ಮಂಥೆರೋ