Webdunia - Bharat's app for daily news and videos

Install App

ಡಬಲ್ ಗೇಮ್ ಆಗಿದ್ದಕ್ಕೆ ಚೈತ್ರಾಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ರು ಕಿಚ್ಚ ಸುದೀಪ್

Sampriya
ಶನಿವಾರ, 16 ನವೆಂಬರ್ 2024 (19:05 IST)
Photo Courtesy X
ಅನಾರೋಗ್ಯ ಹಿನ್ನೆಲೆ ಒಂದು ದಿನ ಆಸ್ಪತ್ರೆಯಲ್ಲಿ ಕಳೆದು ಬಂದು ಮನೆ ಮಂದಿಗೆಲ್ಲ ಹೊರಗಿನ ವಿಚಾರ ತಿಳಿಸಿದ್ದಕ್ಕೆ ಚೈತ್ರಾಗೆ ಕಿಚ್ಚ ಸುದೀಪ್ ಇಂದಿನ ವಾರದ ಕಥೆಯಲ್ಲಿ ಸಖತ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಟಾಸ್ಕ್ ಮುಗಿದ ನಂತರ ವಾಶ್‌ ರೂಂನಲ್ಲಿ ಚೈತ್ರಾ ಮೂರ್ಛೆತಪ್ಪಿ ಬಿದ್ದು ಶುಕ್ರವಾರ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು ದೊಡ್ಮನೆಗೆ ವಾಪಾಸ್ಸಾಗಿದ್ದಾರೆ. ಆಸ್ಪತ್ರೆಯಿಂದ ಬಂದ್ಮೇಲೆ ಚೈತ್ರಾ ಮನೆಮಂದಿಗೆಲ್ಲ ಹೊರಗಡೆ ತಮ್ಮ ಬಗ್ಗೆ ಇರುವ ಅಭಿಪ್ರಾಯಗಳಬಗ್ಗೆ ಹೇಳಿದ್ದಾರೆ. ಈ ವಿಚಾರಕ್ಕೆ ವೀಕೆಂಡ್‌ ಶೋನಲ್ಲಿ ಕಿಚ್ಚ ಸುದೀಪ್‌ ಅವರು ಚೈತ್ರಾಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇಂದು ಕಲರ್ಸ್‌ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ, ಕಿಚ್ಚ ಸುದೀಪ್ ಅವರು, ಬೆಳಗ್ಗೆ ಬಂದು ಎಲ್ಲ ವಿಷಯವನ್ನು ಹೇಳಿದ ಉದ್ದೇಶವೇನು ಎಂದು ಚೈತ್ರಾರಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ಚೈತ್ರಾ ಡಾಕ್ಟರ್ ಹಾಗೂ ನರ್ಸ್‌ಗಳ ಬಳಿ ಕೇಳಿದಾಗ ಅವರು ಹೇಳಿದರು. ಅದಕ್ಕೆ ಸುದೀಪ್‌ ಡಾಕ್ಟರ್ ನಿಮಗೆ ಕಥೆ ಹೇಳಿದ್ರಾ ಎಂದು ಸನ್ನೆಯಲ್ಲೇ ಗದರಿದರು.

ಬ್ರೇಕ್‌ ವೇಳೆ ಬಿಗ್‌ಬಾಸ್‌ ಕ್ಯಾಮಾರ ಮುಂದೆ ಕಣ್ಣೀರು ಹಾಕಿದ ಚೈತ್ರಾ, ನಾನು ಉಸಿರುಗಟ್ಟುವ ವಾತಾವರಣದಲ್ಲಿದ್ದು, ನನ್ನನ್ನು ಮನೆಗೆ ಕಳುಹಿಸಿ ಎಂದು  ಮನವಿ ಮಾಡಿದ್ದಾರೆ. ಅದರಂತೆ ಚೈತ್ರಾ ಈ ವಾರ ಮನೆಗೆ ಹೋಗುವುದು ಪಕ್ಕಾ ಎಂದು ನೆಟ್ಟಿಗರು ಕಮೆಂಟ್ಸ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಮುಂದಿನ ಸುದ್ದಿ
Show comments