ಗೂಂಡಾಗಳ ವಿರುದ್ಧ ದೂರು ನೀಡಿದ್ದೇನೆ, ದರ್ಶನ್ ಫ್ಯಾನ್ಸ್‌ಗೂ ಪ್ರಥಮ್ ಆಗಿದ್ದೇನು

Sampriya
ಶನಿವಾರ, 16 ನವೆಂಬರ್ 2024 (17:52 IST)
Photo Courtesy X
ಬಿಗ್‌ಬಾಸ್‌ ವಿನ್ನರ್‌, ನಟ ಪ್ರಥಮ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಮಧ್ಯೆ ಈ ಹಿಂದಿನಿಂದನೂ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟಗಳು ನಡೆಯುತ್ತಲೇ ಇದೆ.  ಇದೀಗ ದರ್ಶನ್‌ ಫ್ಯಾನ್ಸ್‌ ವಿರುದ್ಧ ಪ್ರಥಮ್ ಠಾಣೆ ಮೆಟ್ಟಿಲೇರಿದ್ದಾರೆ.

ಪ್ರಥಮ್‌ಗೆ  ದರ್ಶನ್ ಫ್ಯಾನ್ಸ್ ಹೋಟೆಲ್‌ವೊಂದರಲ್ಲಿ ನಿಂದಿಸಿದ್ದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಮಾಗಡಿ ರಸ್ತೆಯ ಡಿಸಿಪಿ ಕಚೇರಿಗೆ ಭೇಟಿ ನೀಡಿ ಡಿಸಿಪಿ ಗಿರೀಶ್ ಅವರಿಗೆ ನೇರವಾಗಿ ದರ್ಶನ್ ಫ್ಯಾನ್ಸ್  ವಿರುದ್ಧ ದೂರು ನೀಡಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ಪ್ರಥಮ್‌,  ನಿನ್ನೆ ಹೊಟೇಲ್‌ನಲ್ಲಿ ದರ್ಶನ್ ಅವರ ಕೆಲ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದಾರೆ. ಈ ಹಿನ್ನೆಲೆ ಗೂಂಡಾಗಳ ವಿರುದ್ಧ ದೂರು ದಾಖಲಿಸಿದ್ದೇನೆ.  ಡಿಸಿಪಿ ಗಿರೀಶ್ ಅವರು ಕ್ರಮ ತಗೆದುಕೊಳ್ಳುವುದಾಗಿ ತಿಳಿಸಿದರು. ಇನ್ನು ಕೆಲವೇ ಹೊತ್ತಲ್ಲಿ ತಪ್ಪು ಮಾಡಿದವರು ಒಳಗೆ ಹೋಗುತ್ತಾರೆ. ಅವರಿಗೆ ತಕ್ಕ ಶಿಕ್ಷೆ ಆಗುತ್ತದೆ ಎಂದರು.

ನಿನ್ನೆ ಹೊಟೇಲ್‌ನಲ್ಲಿ ಪ್ರಥಮ್ ತೆರಳಿದ್ದ ವೇಳೆ ಅಲ್ಲಿ ಬಂದ ದರ್ಶನ್ ಫ್ಯಾನ್ಸ್‌ ಜೈ ಡಿಬಾಸ್ ಕೂಗಿ ಅಂತ ಗಲಾಟೆ ಮಾಡಿದ್ದಾರೆ.  ಅಶ್ಲೀಲ ಪದ ಬಳಸಿ ಕೈಮಿಲಾಯಿಸೋಕೆ ಫ್ಯಾನ್ಸ್ ಯತ್ನಿಸಿದರು. ಆ ನಂತರ ಹೋಟೆಲ್‌ನ 8 ಜನ ಬೌನ್ಸರ್ ಆ ಗೂಂಡಾಗಳನ್ನು ಹೊರಗೆ ತಳ್ಳಿದ್ದರು ಎಂದು ಘಟನೆಯ ಬಗ್ಗೆ ಪ್ರಥಮ್ ವಿವರಿಸಿದ್ದರು.

ಆ ನಂತರ ಹೋಟೆಲ್ ಸಿಬ್ಬಂದಿ ಮತ್ತು ಮ್ಯಾನೇಜರ್ ಮನವಿಯ ಮೇರೆಗೆ ನಾನು ದೂರು ಕೊಡಬಾರದು ಎಂದು ನಿರ್ಧರಿಸಿದೆ. ನಮ್ಮ ಪಾಡಿಗೆ ನಾವಿದ್ದೇವೆ. ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವರ ಪಾಡಿಗೆ ಇದ್ದಾರೆ. ಈ ಮಿನಿ ಗೂಂಡಾಗಳ ನಿಗರಾಟ ನೋಡೋಕೆ ಆಗುತ್ತಿಲ್ಲ. ಈ ಘಟನೆ ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಎಂದು ಎಕ್ಸ್‌ನಲ್ಲಿ ನಟ ತಿಳಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments