ಸೀಸನ್‌ನ ಕೊನೆಯ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್‌

Sampriya
ಶನಿವಾರ, 18 ಜನವರಿ 2025 (15:32 IST)
Photo Courtesy X
ಬಿಗ್‌ಬಾಸ್‌ ಸೀಸನ್ 11 ಮುಗಿಯಲು ಕೇವಲ ಒಂದು ವಾರವಷ್ಟೇ ಬಾಕಿಯಿದೆ.  ಇದೀಗ ಫಿನಾಲೆಗೆ ಹನಮಂತು,  ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಪ್ರವೇಶಿಸಿದ್ದಾರೆ. ಈ ವಾರ ನಾಮಿನೇಷನ್ ತೂಗುಕತ್ತಿಯಲ್ಲಿ ಭವ್ಯಾ, ಗೌತಮಿ, ಉಗ್ರಂ ಮಂಜು, ಧನರಾಜ್‌, ರಜತ್ ಅವರು ಇದ್ದಾರೆ. ಇದೀಗ ಡಬಲ್ ಎಲಿಮಿನೇಷನ್ ಎಂಬ ಶಾಕ್ ನೀಡಿದ್ದಾರೆ.  

ಇಂದು ಹಾಗೂ ನಾಳೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬರುವುದು ಗ್ಯಾರಂಟಿಯಾಗಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಇದು ಈ ಸೀಸನ್‌ನ ಕಡೆಯ ವಾರದ ಪಂಚಾಯಿತಿ ಎಂದಿದ್ದಾರೆ.  

ಬಿಗ್ ಬಾಸ್ ಕನ್ನಡ ಸೀಸನ್ 11 ಇಂದು ಹಾಗೂ ನಾಳೆ ವೀಕೆಂಡ್‌ ಸಂಚಿಕೆಗಳನ್ನು ಹೊರತುಪಡಿಸಿದರೆ ಕೇವಲ ಒಂದು ವಾರ ಪ್ರಸಾರಗೊಳ್ಳಲಿದೆ. ಈಗಾಗಲೇ ಗ್ರ್ಯಾಂಡ್‌ ಫಿನಾಲೆ ದಿನಾಂಕ ಕೂಡ ನಿಗದಿಯಾಗಿತ್ತು.

ಧನರಾಜ್‌ ಆಚಾರ್‌ ಎಲ್ಲ ಸ್ಪರ್ಧಿಗಳಿಗಿಂತ ಹೆಚ್ಚು ಪಾಯಿಂಟ್ಸ್‌ ಪಡೆದು ಮಿಡ್‌ ವೀಕ್‌ ಎಲಿಮಿನೇಷನ್‌ನಿಂದ ಪಾರಾಗಿದ್ದರು. ಆದರೆ ಕೊನೆಯ ಟಾಸ್ಕ್‌ನಲ್ಲಿ ಧನರಾಜ್‌ ಮಾಡಿದ ಎಡವಟ್ಟಿನಿಂದಾಗಿ ಈಗ ಡೇಂಜರ್ಸ್‌ ಝೋನ್‌ನಲ್ಲಿ ಇದ್ದಾರೆ.

ಇನ್ನೂ ಪ್ರೇಕ್ಷಕರ ಲೆಕ್ಕಚಾರ ಪ್ರಕಾರ ಈ ವಾರ ಮಿಡ್‌ ವೀಕ್ ಗೌತಮಿ ಅವರು ಎಲಿಮಿನೇಟ್ ಆಗಬೇಕಿತ್ತು. ಆದರೆ ಧನರಾಜ್‌ ಕನ್ನಡಿ ನೋಡುತ್ತ ಟಾಸ್ಕ್‌ನಲ್ಲಿ ಕೀ ತೆಗೆದ ಕಾರಣ ಮಿಡ್‌ ವೀಕ್‌ ಎಲಿಮಿನೇಷನ್‌ ಹೋಲ್ಡ್‌ ಮಾಡಲಾಗಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments