ಬೆಂಗಳೂರು: ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಅಭಿನಯಿಸುತ್ತಿರುವ ಸಿನಿಮಾ ತಡಪ್ಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
ಸುನಿಲ್ ಶೆಟ್ಟಿ-ಕಿಚ್ಚ ಸುದೀಪ್ ನಡುವೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಪೈಲ್ವಾನ್ ಸಿನಿಮಾದಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದರು. ಇದೀಗ ಸುದೀಪ್, ಸುನಿಲ್ ಶೆಟ್ಟಿ ಪುತ್ರನ ಸಿನಿಮಾ ಟ್ರೈಲರ್ ವೀಕ್ಷಿಸಿ ಮೆಚ್ಚುಗೆಯ ಮಾತನಾಡಿದ್ದಾರೆ.
ಈ ಸಿನಿಮಾಗೆ ನೀವು ಎಷ್ಟು ಕಾತುರದಿಂದ ಕಾಯುತ್ತಿದ್ದಿರಿ ಎಂದು ನನಗೆ ಗೊತ್ತಿದೆ. ನಿಮ್ಮ ನಿರೀಕ್ಷೆಗೆ ತಕ್ಕ ಹಾಗೆಯೇ ಇದೆ. ಅಹಾನ್ ವೃತ್ತಿ ಜೀವನಕ್ಕೆ ಶುಭವಾಗಲಿ ಎಂದು ಸುದೀಪ್ ಹಾರೈಸಿದ್ದಾರೆ.