Webdunia - Bharat's app for daily news and videos

Install App

ಸುಖಾ ಸುಮ್ಮನೇ ವಿವಾದ ಮಾಡುವವರ ವಿರುದ್ಧ ಗರಂ ಆದ ಕಿಚ್ಚ ಸುದೀಪ್

Webdunia
ಮಂಗಳವಾರ, 19 ಜೂನ್ 2018 (10:36 IST)
ಬೆಂಗಳೂರು: ಸುಖಾ ಸುಮ್ಮನೇ ತಮ್ಮ ಹೆಸರು, ಸಿನಿಮಾ ಹೆಸರು ಹೇಳಿಕೊಂಡು ವಿವಾದವೆಬ್ಬಿಸುವವರ ವಿರುದ್ಧ ಕಿಚ್ಚ ಸುದೀಪ್ ಪದೇ ಪದೇ ಟ್ವಿಟರ್ ಪೇಜ್ ನಲ್ಲಿ ಸ್ಪಷ್ಟನೆ ಕೊಡುತ್ತಲೇ ಇರುತ್ತಾರೆ. ಇದೀಗ ಮತ್ತೆ ಅಂತಹದ್ದೇ ಕೆಲಸ ಮಾಡಿದ್ದಾರೆ.

ಆಗಿದ್ದಿಷ್ಟೇ. ದುನಿಯಾ ವಿಜಿ ಮತ್ತು ಪುತ್ರ ಜತೆಯಾಗಿ ಅಭಿನಯಿಸಿರುವ ಕುಸ್ತಿ ಸಿನಿಮಾ ಟೀಸರ್ ನಲ್ಲಿ ನಿನ್ನಂಥಾ ಸಾವಿರ ಪೈಲ್ವಾನ್ ಗೆ ನನ್ನಪ್ಪ ಒಬ್ಬನೇ ಉಸ್ತಾದ್ ಎಂದ ಡೈಲಾಗ್ ವಿಚಾರವಾಗಿ ಕಿಚ್ಚ ಅಭಿಮಾನಿಗಳು ಗರಂ ಆಗಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿತ್ತು.

ಕಿಚ್ಚ ಸುದೀಪ್ ಇದೀಗ ಪೈಲ್ವಾನ್ ಎಂಬ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾಗೆ ವಿಜಿ ಪುತ್ರನ ಬಾಯಲ್ಲಿ ಈ ರೀತಿ ಕೌಂಟರ್ ಕೊಡಿಸಿದ್ದಾರೆ ಎಂದು  ಪುಕರಾರು ಎಬ್ಬಿಸಲಾಗಿತ್ತು. ಈ ಬಗ್ಗೆ ವರದಿ ಮಾಡಿದ ವಾಹಿನಿಗೆ ಖಡಕ್ ಎಚ್ಚರಿಕೆ ಕೊಟ್ಟಿರುವ ಸುದೀಪ್ ಇಂತಹ ಸುದ್ದಿಯನ್ನು ದಯವಿಟ್ಟು ಇಲ್ಲಿಗೇ ನಿಲ್ಲಿಸಿ. ನಿಮ್ಮ ಚಾನೆಲ್ ಬಗ್ಗೆ ನನಗೆ ಗೌರವವಿದೆ. ಆದರೆ ಇಂತಹದ್ದನ್ನೆಲ್ಲಾ ಬೆಳೆಸಬೇಡಿ ಎಂದು ವಾರ್ನ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಫಿಟ್ನೆಸ್ ಚಾಲೆಂಜ್ ವಿಚಾರವಾಗಿ ಇದೇ ರೀತಿ ಅಭಿಮಾನಿಗಳ ನಡುವಿನ ಗುದ್ದಾಟಕ್ಕೆ ಸುದೀಪ್ ಟ್ವಿಟರ್ ನಲ್ಲಿ ಫುಲ್ ಸ್ಟಾಪ್ ಇಡಬೇಕಾಯಿತು. ಇದೀಗ ಮತ್ತೆ ಹೀಗಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

43ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಬೀಚ್‌ನಲ್ಲಿ ಪತಿ ಜತೆ ಬರ್ತಡೇ ಸೆಲೆಬ್ರೇಟ್‌

ಭಾಗ್ಯಲಕ್ಷ್ಮೀ ಸೀರಿಯಲ್‌, ಎಲ್ಲ ಗೊತ್ತಿರುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡ್ಬಾರ್ದು ಅಂತ ಗೊತ್ತಿಲ್ವಾ, ಟ್ರೋಲ್‌

ಎಕ್ಕ ಮೂವಿ ಹೇಗಿದೆ: ಫಸ್ಟ್ ಹಾಫ್ ನೋಡಿದ ಪ್ರೇಕ್ಷಕರು ಏನಂತಿದ್ದಾರೆ

ಆಂಕರ್ ಅನುಶ್ರೀ ಮದುವೆಯಾಗುತ್ತಿರುವ ಹುಡುಗನ ಫೋಟೋ ವೈರಲ್

ಸುಪ್ರೀಂಕೋರ್ಟ್ ಕೇಳಿದ ಅದೊಂದು ಪ್ರಶ್ನೆಗೆ ದರ್ಶನ್ ಆಂಡ್ ಗ್ಯಾಂಗ್ ಗೆ ನಡುಕ ಶುರು

ಮುಂದಿನ ಸುದ್ದಿ
Show comments