Select Your Language

Notifications

webdunia
webdunia
webdunia
webdunia

ಕನ್ನಡದ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ

ಕನ್ನಡದ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ
ಮುಂಬೈ , ಬುಧವಾರ, 13 ಜೂನ್ 2018 (12:49 IST)
ಮುಂಬೈ : ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರುವ ಸುದ್ದಿ ಈಗಾಗಲೇ ಸಾಕಷ್ಟು ಬಾರಿ ಕೇಳಿಬಂದಿದ್ದು, ಅದೇರೀತಿ ಇದೀಗ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ಕೂಡ ಕನ್ನಡ ಸಿನಿಮಾವೊಂದರಲ್ಲಿ ನಟಿಸಲು ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ.


ಹೌದು. ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸುತ್ತಿರುವ ಕೋಟಿಗೊಬ್ಬ-3 ಸಿನಿಮಾದಲ್ಲಿ ಇಂಟರ್‌‌‌ಪೋಲ್ ಅಧಿಕಾರಿಯಾಗಿ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ನಟಿಸಲಿದ್ದಾರೆ. ಈಗಾಗಲೇ ಕೊಟಿಗೊಬ್ಬ-3 ಸಿನಿಮಾದಲ್ಲಿ ಸುದೀಪ್ ಅವರ ಎದುರು ಡಾನ್‌‌‌‌-2 ಖ್ಯಾತಿಯ ಬಾಲಿವುಡ್‌‌ ನ ನವಾಬ್‌ ಶಾ ನಟಿಸುತ್ತಿದ್ದರೆ ಅವರ ಜೊತೆಗೆ ಇದೀಗ ಅಫ್ತಾಬ್ ಶಿವದಾಸನಿ ಅವರು ಕೂಡಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಪ್ರೇಮಂ ಖ್ಯಾತಿಯ ಮಡೋನಾ ಸೆಬಾಸ್ಟಿನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸದೊಂದು ಫಿಟ್ನೆಸ್ ಚಾಲೆಂಜ್ ಹಾಕಿದ ನಟ ಸುದೀಪ್