ಪೈಲ್ವಾನ್ ಭಾಗ 2 ಕ್ಕೆ ಗ್ರೀನ್ ಸಿಗ್ನಲ್ ನೀಡಿದ ಕಿಚ್ಚ ಸುದೀಪ್

Webdunia
ಶನಿವಾರ, 28 ಸೆಪ್ಟಂಬರ್ 2019 (08:27 IST)
ಬೆಂಗಳೂರು: ಪೈರಸಿ ಹಾವಳಿ ನಡುವೆಯೂ ಪೈಲ್ವಾನ್ ಭರ್ಜರಿಯಾಗಿ ಗೆದ್ದಿರುವುದರಿಂದ ನಿರ್ದೇಶಕ ಕೃಷ್ಣ ಮತ್ತು ಇಡೀ ಚಿತ್ರತಂಡ ಖುಷಿಯಾಗಿದ್ದು, ಮತ್ತೊಂದು ಭಾಗ ಮಾಡಲು ಸಿದ್ಧತೆ ನಡೆಸಿದೆ.


ಪೈಲ್ವಾನ್ ಸಿನಿಮಾಗಾಗಿ ಸುದೀಪ್ ಜಿಮ್ ನಲ್ಲಿ ಸಾಕಷ್ಟು ಬೆವರಿಳಿಸಿದ್ದರು. ಹಾಗಾಗಿ ಈ ಸಿನಿಮಾ ಬಗ್ಗೆ ಕಿಚ್ಚನಿಗೂ ಸಾಕಷ್ಟು ನಿರೀಕ್ಷೆಗಳಿದ್ದವು. ಆ ನಿರೀಕ್ಷೆಗಳನ್ನು ಪ್ರೇಕ್ಷಕ ಹುಸಿ ಮಾಡಲಿಲ್ಲ. ಹೀಗಾಗಿ ಇದೇ ಖುಷಿಯಲ್ಲಿ ನಿರ್ದೇಶಕ ಕೃಷ್ಣ ಈಗ ಮತ್ತೊಂದು ಭಾಗ ಮಾಡಲು ಕಿಚ್ಚ ಸುದೀಪ್ ಬಳಿ ಕತೆ ಹೇಳಿದ್ದಾರಂತೆ.

ಅದಕ್ಕೆ ಕಿಚ್ಚ ಒಪ್ಪಿಗೆ ಕೊಟ್ಟಿದ್ದೂ ಆಗಿದೆ. ಬೆಳಿಗ್ಗೆ 4.30 ಗಂಟೆಗೆ ಏಳುವುದು, ರಾತ್ರಿ 8.30 ಕ್ಕೆ ಮಲಗುವುದು, ಡಯಟ್, ಜಿಮ್ ಎಲ್ಲವೂ ಮತ್ತೆ ಮಾಡಬೇಕಾಗಿದೆ. ಅದರ ಜತೆಗೆ ಪೈರಸಿ ಹಾವಳಿ. ಏನೇ ಇದ್ದರೂ ಮತ್ತೆ ಮಾಡಲು ನಾನು ರೆಡಿ ಎಂದು ಕಿಚ್ಚ ಮತ್ತೆ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ. ಮೂಲಗಳ ಪ್ರಕಾರ ಕೋಟಿಗೊಬ್ಬ 3 ಬಳಿಕ ಪೈಲ್ವಾನ್ ಭಾಗ 2 ಆರಂಭವಾಗಲಿದೆ. ಆದರೆ ಈ ಭಾಗದಲ್ಲಿ ಸುದೀಪ್ ಪಾತ್ರ ಹೇಗಿರಬಹುದು ಎಂಬುದು ಸಸ್ಪೆನ್ಸ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಸ್ ಜಾನಕಿಯವರ ಸಾವಿಗೆ ಇದೇ ಕಾರಣವಾಯ್ತಾ

ಎಸ್ ಜಾನಕಿಯವರ ಪತಿ ಯಾರು, ಅವರ ವಿವಾಹವಾಗಿದ್ದು ಹೇಗೆ ಇಲ್ಲಿದೆ ವಿವರ

ಎಸ್ ಜಾನಕಿ ಪದ್ಮಭೂಷಣ ಪ್ರಶಸ್ತಿ ನೀಡಲು ಬಂದಾಗ ತಿರಸ್ಕರಿಸಿದ್ದು ಯಾಕೆ ಗೊತ್ತಾ: ನಿಜಕ್ಕೂ ಸ್ಪೂರ್ತಿ

ಗಾನಕೋಗಿಲೆ ಎಸ್ ಜಾನಕಿ ಅಮ್ಮ ಇನ್ನಿಲ್ಲ

ಬಾಂದ್ರಾ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ ಸಲ್ಮಾನ್‌ ಖಾನ್‌, ಎಷ್ಟು ಕೋಟಿಗೆ ಗೊತ್ತಾ

ಮುಂದಿನ ಸುದ್ದಿ
Show comments