Webdunia - Bharat's app for daily news and videos

Install App

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಕಿಚ್ಚ ಸುದೀಪ್ ಪ್ರಚಾರ

Krishnaveni K
ಮಂಗಳವಾರ, 12 ಮಾರ್ಚ್ 2024 (12:31 IST)
Photo Courtesy: Twitter
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಿರುವ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಗೆ ಕಿಚ್ಚ ಸುದೀಪ್ ಬೆಂಬಲ ನೀಡಲಿದ್ದಾರೆ.

ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಮಗಳೂ ಆಗಿರುವ ಗೀತಾ ಶಿವರಾಜ್ ಕುಮಾರ್ ಗೆ ಶಿವಮೊಗ್ಗ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನೇನು ಅವರು ಶಿವಮೊಗ್ಗದಲ್ಲಿ ಪ್ರಚಾರ ಕಾರ್ಯವನ್ನೂ ಶುರು ಮಾಡಲಿದ್ದಾರೆ. ಅವರಿಗೆ ಪತಿ ಶಿವರಾಜ್ ಕುಮಾರ್ ಕೂಡಾ ಸಾಥ್ ನೀಡಲಿದ್ದಾರೆ.

ಆದರೆ ಅಷ್ಟು ಮಾತ್ರವಲ್ಲ, ಗೀತಾ ಶಿವರಾಜ್ ಕುಮಾರ್ ಪರ ಈಗ ಕಿಚ್ಚ ಸುದೀಪ್ ಕೂಡಾ ಪ್ರಚಾರ ನಡೆಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ಕಿಚ್ಚ ಸುದೀಪ್ ಬೆಂಬಲವನ್ನೂ ಕೋರಲಾಗಿದ್ದು ಅದಕ್ಕೆ ಸುದೀಪ್ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಸುದೀಪ್ ಕೂಡಾ ಶಿವಮೊಗ್ಗದವರು. ಜೊತೆಗೆ ಗೀತಾ ಶಿವರಾಜ್ ಕುಮಾರ್ ಅವರನ್ನು ತಮ್ಮ ಸ್ವಂತ ಅಕ್ಕನಂತೆ ಗೌರವಿಸುತ್ತಾರೆ.

ಹೀಗಾಗಿ ಸುದೀಪ್ ರನ್ನು ಪ್ರಚಾರಕ್ಕೆ ಕರೆತರಲು ಸಿದ್ಧತೆ ನಡೆಸಿದ್ದಾರೆ. ಕೇವಲ ಸುದೀಪ್ ಮಾತ್ರವಲ್ಲ, ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಗೆ ಆಪ್ತರಾಗಿರುವ ಅನೇಕ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೂ ಪ್ರಚಾರಕ್ಕೆ ಬರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಈ ಒಬ್ಬ ವ್ಯಕ್ತಿಯನ್ನು ನೆಪ ಮಾಡಿ ಜಾಮೀನು ರದ್ದು ಮಾಡಬೇಡಿ ಎನ್ನುತ್ತಿರುವ ಪವಿತ್ರಾ ಗೌಡ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments