Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಈ ಫೋಟೋವನ್ನು ಪದೇ ಪದೇ ನೋಡುತ್ತಾರಂತೆ ಕಿಚ್ಚ ಸುದೀಪ್

webdunia
ಶನಿವಾರ, 11 ಜುಲೈ 2020 (09:49 IST)
ಬೆಂಗಳೂರು: ಕಲಾವಿದ ಅಭಿಮಾನಿಯೊಬ್ಬರು ಮಾಡಿಕೊಟ್ಟ ತಮ್ಮದೇ ಫೋಟೋ ನೋಡಿ ಭಾವುಕರಾದ ಕಿಚ್ಚ ಸುದೀಪ್ ಆ ಕಲಾವಿದರನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ.

 

ಕಿಚ್ಚನ ಬಾಲ್ಯದ ಮತ್ತು ಈಗಿನ ಫೋಟೋವನ್ನು ಕೊಲೇಜ್ ಮಾಡಿ ಸ್ಕೆಚ್ ಕಲಾವಿದ ಅಭಿಮಾನಿಯೊಬ್ಬರು ಫೋಟೋ ಕಳುಹಿಸಿಕೊಟ್ಟಿದ್ದರು.  ಇದು ಗಮನಕ್ಕೆ ಬಂದ ತಕ್ಷಣವೇ ತಮ್ಮ ಟ್ವಿಟರ್ ಪೇಜ್ ನಲ್ಲಿ ಫೋಟೋ ಹಾಕಿಕೊಂಡ ಕಿಚ್ಚ ಈ ಫೋಟೋ ಮಾಡಿದವರು ಯಾರೇ ಆಗಿದ್ದರೂ ಧನ್ಯವಾದಗಳು ಎಂದಿದ್ದರು.

ಇದೀಗ ಆ ಅಭಿಮಾನಿಯ ಗುರುತು ಪತ್ತೆಯಾಗಿದ್ದು ಕಾರ್ತಿಕ್ ಎಂಬವರು ಈ ಕಲಾಕೃತಿ ಮಾಡಿದ್ದೆಂದು ಗೊತ್ತಾಗಿದೆ. ಇದಾದ ಬಳಿಕ ಮತ್ತೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗೆ ಧನ್ಯವಾದ ಸಲ್ಲಿಸಿದ ಕಿಚ್ಚ ಇದು ಅಪರೂಪದ ಕಲಾಕೃತಿ. ಈ ಫೋಟೋವನ್ನು ಪದೇ ಪದೇ ನೋಡಬೇಕೆನಿಸುತ್ತದೆ. ನನ್ನ ಬಾಲ್ಯ, ಶಿವಮೊಗ್ಗದ ಜೀವನ ಎಲ್ಲವನ್ನೂ ಈ ಫೋಟೋ ನೆನಪಿಸಿತು. ಈ ಫೋಟೋ ಮಾಡಿ ಕಾರ್ತಿಕ್ ಗೆ ಧನ್ಯವಾದಗಳು ಎಂದು ಕಿಚ್ಚ ಭಾವುಕರಾಗಿ ಬರೆದುಕೊಂಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕಾಮಿಡಿ ಕಿಲಾಡಿಗಳು ನಯನಾ ಕನ್ನಡ ವಿವಾದ: ನೆರವಿಗೆ ಬಂದ ಜಗ್ಗೇಶ್