Select Your Language

Notifications

webdunia
webdunia
webdunia
webdunia

ಮೊನ್ನೆ ಡಿ ಬಾಸ್ ದರ್ಶನ್, ನಿನ್ನೆ ಕಿಚ್ಚ ಸುದೀಪ್! ಏನಿದು ಮ್ಯಾಜಿಕ್?!

ಮೊನ್ನೆ ಡಿ ಬಾಸ್ ದರ್ಶನ್, ನಿನ್ನೆ ಕಿಚ್ಚ ಸುದೀಪ್! ಏನಿದು ಮ್ಯಾಜಿಕ್?!
ಬೆಂಗಳೂರು , ಬುಧವಾರ, 17 ಜುಲೈ 2019 (09:30 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಸಿನಿಮಾ ಬಿಡುಗಡೆಗಿಂತ ಮುಂಚೆ ಆ ಸಿನಿಮಾದ ಹಾಡು ಬಿಡುಗಡೆಯಾಗಿ ಅದು ಭರ್ಜರಿ ಲೈಕ್ಸ್ ಪಡೆಯುವ ಟ್ರೆಂಡ್ ಶುರುವಾಗಿದೆ.


ಮೊನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮೇಘನಾ ಸರ್ಜಾ ಅಭಿನಯದ ಕುರುಕ್ಷೇತ್ರ ಸಿನಿಮಾದ ಚಾರುತಂತಿ ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿ ಲಕ್ಷಗಟ್ಟಲೆ ವ್ಯೂ ಪಡೆದು ಸುದ್ದಿಯಾಗಿತ್ತು. ಆ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷ ವ್ಯೂ ಪಡೆದು ಭಾರೀ ಹಿಟ್ ಆಗಿದೆ.

ಇದೀಗ ಅದೇ ಮೋಡಿಯನ್ನು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಹಾಡು ಮಾಡಿದೆ. ನಿನ್ನೆ ಸಂಜೆ ಪೈಲ್ವಾನ್ ಸಿನಿಮಾದ ಕಣ್ಮಣಿಯೇ ಕಣ್ಣು ಹೊಡಿಯೇ... ಎಂದು ರೊಮ್ಯಾಂಟಿಕ್ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೆಲವೇ ನಿಮಿಷಗಳೊಳಗೆ ಇದೂ ಲಕ್ಷ ವ್ಯೂ ಪಡೆದಿದೆ. ಸಂಚಿತ್ ಹೆಗ್ಡೆ ಹಾಡಿರುವ ರೊಮ್ಯಾಂಟಿಕ್ ನಂಬರ್ ಅತ್ತ ಪಡ್ಡೆ ಹುಡುಗರಿಗೂ ಇಷ್ಟವಾಗುವಂತಿದೆ. ಹೀಗಾಗಿ ಈ ಹಾಡೂ ಈಗ ಹಿಟ್ ಲಿಸ್ಟ್ ಸೇರ್ಪಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಸಾವಿನ ವದಂತಿ! ಸುಳ್ಳು ಸುದ್ದಿಗೆ ಏನಂದ್ರು ದ್ವಾರಕೀಶ್?