ಕಾದು ಕಾದು ಸುಸ್ತಾಗಿರುವ ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್‌ ಕೊಡಲಿದ್ದಾರೆ ಕಿಚ್ಚ ಸುದೀಪ್

Sampriya
ಶುಕ್ರವಾರ, 23 ಆಗಸ್ಟ್ 2024 (17:32 IST)
Photo Courtesy X
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಒಂದೆಡೆ ಅವರ ನಿರೂಪಣೆಯಲ್ಲಿ ಮೂಡಿಬರುವ ಕಿರುತೆರೆ ಬಿಗ್‌ಬಾಸ್‌ ಶೋ ಆರಂಭಕ್ಕೆ  ಕಾಯುತ್ತಿದ್ದರೆ,  ಮತ್ತೊಂದೆಡೆ ಅವರನ್ನು ದೊಡ್ಡ ಪರದೆ ಮೇಲೆ ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕಿಚ್ಚ ಸುದೀಪ್ ಅವರ ನಟನೆಯ ಸಿನಿಮಾಗಾಗಿ ಕಾಯುತ್ತಿರುವ ಅವರ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿಯೊಂದು ಇದೆ.

ಈ ವಿಚಾರ ಸುದೀಪ್ ಅವರ ಹುಟ್ಟುಹಬ್ಬದ ದಿನ ರಿವೀಲ್ ಆಗಲಿದೆ ಎಂಬುದು ಸದ್ಯದ ವಿಷಯ. ಸೆಪ್ಟೆಂಬರ್ 2ರಂದು 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ. ಅದೇನೆಂದರೆ ಅವರ ನಟನೆಯ ಬಹುನಿರೀಕ್ಷಿತ 'ಮ್ಯಾಕ್ಸ್‌' ಸಿನಿಮಾ ರಿಲೀಸ್ ಡೇಟ್ ಅನ್ನು ಅಂದು ಅವರು ಅನೌನ್ಸ್ ಮಾಡಲಿದ್ದಾರೆ.

ಅದಲ್ಲದೆ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಕೂಡಾ ಅಕ್ಟೋಬರ್‌ ತಿಂಗಳಿನಲ್ಲಿ ಶುರುವಾಗಲಿದೆ ಎಂಬುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಈಗಾಗಲೇ ಸುದೀಪ್ ಅವರ ಪ್ರೋಮೋ ಶೂಟ್ ಆಗಿದ್ದು, ಕಿರುತೆರೆಯಲ್ಲಿ ಅವರ ಹೊಸ ಲುಕ್‌ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದಲ್ಲದೆ ದೊಡ್ಮನೆಗೆ ಎಂಟ್ರಿಯಾಗುವ ಅಭ್ಯರ್ಥಿಗಳ ಪಟ್ಟಿಯೂ ಭಾರೀ ಕುತೂಹಲ ಮೂಡಿಸುತ್ತಿದೆ.

ಒಟ್ಟಾರೆ ಸೆಪ್ಟೆಂಬರ್‌ನಿಂದ ಕಿಚ್ಚ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ಮುಂದಿನ ಸುದ್ದಿ
Show comments