ಹೊಸ ಸಿನಿಮಾ ಬಗ್ಗೆ ಸುಳಿವು ಕೊಟ್ಟ ಕಿಚ್ಚ ಸುದೀಪ್

Webdunia
ಶುಕ್ರವಾರ, 18 ಫೆಬ್ರವರಿ 2022 (17:14 IST)
ಬೆಂಗಳೂರು: ವಿಕ್ರಾಂತ್ ರೋಣ ಬಿಡುಗಡೆಗಾಗಿ ಕಾಯುತ್ತಿರುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.

ಸುದೀಪ್ ಇಂದು ತಮ್ಮ ಹೊಸ ಸಿನಿಮಾ ಬಗ್ಗೆ ಸುಳಿವೊಂದನ್ನು ಕೊಟ್ಟಿದ್ದಾರೆ. ವಿಕ್ರಾಂತ್ ರೋಣ ಫೆಬ್ರವರಿ 24 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಮುಂದೂಡಿಕೆಯಾಗಿದೆ. ಇದೀಗ ಹೊಸ ರಿಲೀಸ್ ದಿನಾಂಕ ಘೋಷಣೆಯಾಗಬೇಕಿದೆ. ಅದು ಸದ್ಯದಲ್ಲೇ ಆಗಲಿದೆ ಎಂದಿದ್ದಾರೆ ಸುದೀಪ್. ಅದರ ಜೊತೆಗೆ ತಮ್ಮ ಹೊಸ ಸಿನಿಮಾ ಬಗ್ಗೆ ಹೇಳಿದ್ದಾರೆ.

‘ವಿಕ್ರಾಂತ್ ರೋಣ 3ಡಿ ಲುಕ್ ಅದ್ಭುತವಾಗಿದೆ. ಸದ್ಯದಲ್ಲೇ ರಿಲೀಸ್ ದಿನಾಂಕ ಘೋಷಿಸುತ್ತೇವೆ. ಅದರ ಜೊತೆಗೆ ನನ್ನ ಮುಂದಿನ ಸಿನಿಮಾ ಅನೂಪ್ ಭಂಡಾರಿ ಜೊತೆಗೆ. ಅದೂ ಸದ್ಯದಲ್ಲೇ ಘೋಷಣೆಯಾಗಲಿದೆ. ಅದಕ್ಕಾಗಿ ಎದಿರು ನೋಡುತ್ತಿದ್ದೇನೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುದೀಪ್ ಪತ್ನಿ ಪ್ರಿಯಾ ಸುದೀಪ್  ಕೂಡಾ ಭಾಗಿಯಾಗಲಿದ್ದಾರೆ.

ಅನೂಪ್ ಭಂಡಾರಿ ಜೊತೆಗೆ ಸುದೀಪ್ ಬಿಲ್ಲ ರಂಗ ಭಾಷ ಮತ್ತು ಅಶ್ವತ್ಥಾಮ ಎಂಬ ಎರಡು ಸಿನಿಮಾಗಳ ಟೈಟಲ್ ಈ ಮೊದಲು ಘೋಷಣೆಯಾಗಿತ್ತು. ಈ ಪೈಕಿ ಯಾವ ಸಿನಿಮಾವನ್ನು ಅವರು ಮೊದಲು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಧರ್ಮೇಂದ್ರ ನಿಧನದ ಸುದ್ದಿ ಸುಳ್ಳು: ಕುಟುಂಬದಿಂದಲೇ ಬಂತು ಸ್ಪಷ್ಟನೆ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ

ಸಿಸಿಬಿ ವಿಚಾರಣೆಗೆ ಬಗ್ಗಲ್ಲ, ಏನೇ ಆದ್ರೂ ದರ್ಶನ್ ಜೊತೆಗೇ ನಿಲ್ಲುತ್ತೇನೆ ಎಂದ ಧನ್ವೀರ್

ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳು ನಟ ಅಭಿನಯ್ ಕಿಂಗರ್ ಇನ್ನಿಲ್ಲ

ಮುಂದಿನ ಸುದ್ದಿ
Show comments