Publish Date: Thu, 05 Sep 2019 (09:03 IST)
Updated Date: Thu, 05 Sep 2019 (09:05 IST)
ಬೆಂಗಳೂರು: ಕೋಲಾರ ಚಿನ್ನದ ಗಣಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಶೂಟಿಂಗ್ ಗೆ ಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಚಿತ್ರತಂಡ ಬೇರೆ ಲೊಕೇಷನ್ ನಲ್ಲಿ ಶೂಟಿಂಗ್ ಆರಂಭಿಸಿದೆ.
ಚಿನ್ನದ ಗಣಿಯಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಿದ ಹಿನ್ನಲೆಯಲ್ಲಿ ಚಿತ್ರತಂಡ ಹೈದಾರಾಬಾದ್ ಮತ್ತು ಬೆಂಗಳೂರಿಗೆ ಲೊಕೇಷನ್ ಶಿಫ್ಟ್ ಮಾಡಿದೆ.
ಕೋಲಾರದ ಸೈನೈಡ್ ಗುಡ್ಡಗಳಲ್ಲಿ ಶೂಟಿಂಗ್ ನಡೆಸುವುದರಿಂದ ಇಲ್ಲಿ ಜನವಾಸಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ಹೀಗಾಗಿ ಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತು.