Webdunia - Bharat's app for daily news and videos

Install App

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

Krishnaveni K
ಸೋಮವಾರ, 9 ಜೂನ್ 2025 (09:51 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಪುತ್ರಿ ಕೀರ್ತಿ ವಿಷ್ಣುವರ್ಧನ್ ನಿಜಕ್ಕೂ ಯಾರ ಮಗಳು, ಯಾರಿಂದ ಅವರನ್ನು ದತ್ತು ಪಡೆಯಲಾಗಿತ್ತು ಇಲ್ಲಿದೆ ವಿವರ.

ಕಲಾಮಾಧ್ಯಮ ಯೂ ಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಕೀರ್ತಿ ವಿಷ್ಣುವರ್ಧನ್ ತಮ್ಮ ಜೀವನಕತೆಯನ್ನು ಹೊರಹಾಕಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಕುರಿತಾಗಿ ಅನೇಕ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹೊರಹಾಕಿದ್ದಾರೆ.

ಕೀರ್ತಿ ವಿಷ್ಣುವರ್ಧನ್ ದತ್ತು ಪಡೆದಿದ್ದು ಯಾರಿಂದ?
ಎಲ್ಲರಿಗೂ ಗೊತ್ತಿರುವ ಹಾಗೆ ಕೀರ್ತಿ ವಿಷ್ಣುವರ್ಧನ್ ದತ್ತು ಪುತ್ರಿ. ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್  ಹುಟ್ಟಿದಾಗಲೇ ಕೀರ್ತಿ ಅವರನ್ನು ದತ್ತು ಪಡೆದಿದ್ದರಂತೆ. ಭಾರತಿ ವಿಷ್ಣುವರ್ಧನ್ ಸಹೋದರಿಯ ಮಗಳೇ ಕೀರ್ತಿ. ಸಹೋದರಿ ಜೊತೆಗೆ ವಿಷ್ಣುವರ್ಧನ್ ದಂಪತಿಗೆ ಭಾರೀ ಆಪ್ತರು. ಹೀಗಾಗಿ ನಿಮಗೆ ಆಗುವ ಮೊದಲ ಮಗುವನ್ನು ನಮಗೆ ಕೊಡಬೇಕು ಎಂದು ವಿಷ್ಣುವರ್ಧನ್ ಮೊದಲೇ ಮಾತು ತೆಗೆದುಕೊಂಡಿದ್ದರಂತೆ. ಅದರಂತೆ ಕೀರ್ತಿ ಹುಟ್ಟಿದ ತಕ್ಷಣವೇ ವಿಷ್ಣುವರ್ಧನ್ ಗೆ ಆಕೆಯನ್ನು ದತ್ತು ನೀಡಿದ್ದರು.

ಭಾರತಿ ಅಮ್ಮ-ವಿಷ್ಣುವರ್ಧನ್ ಮದುವೆಯಲ್ಲಿ ಅವರ ತೊಡೆಯ ಮೇಲೆ ಕೀರ್ತಿ ಕೂಡಾ ಕೂತಿದ್ದರಂತೆ. ಚಿಕ್ಕ ವಯಸ್ಸಿನಲ್ಲಿ ಅಪ್ಪ-ಅಮ್ಮ ಇಬ್ಬರೂ ತುಂಬಾ ಬ್ಯುಸಿಯಾಗಿದ್ದರು. ಈ ಕಾರಣಕ್ಕೆ ನಾನು ಬೆಳೆದಿದ್ದೆಲ್ಲಾ ಅಜ್ಜಿ ಜೊತೆಗೇ ಎಂದಿದ್ದಾರೆ ಕೀರ್ತಿ.

ಆದರೆ ದತ್ತು ಮಗಳು ಎಂದರೆ ಸಮಾಜ ನೋಡುವ ದೃಷ್ಟಿಯೇ ಬೇರೆ. ಹೀಗೇ ಸಾಕಷ್ಟು ಮಾತು ಕೇಳಬೇಕಾಗಿ ಬಂದಾಗ ಅಪ್ಪ-ಅಮ್ಮ ಒಂದು ದಿನ ನನ್ನನ್ನು ಕೂರಿಸಿಕೊಂಡು ನಾವು ನಿನ್ನನ್ನು ದತ್ತು ಪಡೆದಿದ್ದೇವೆ. ಯಾರು ಏನೇ ಹೇಳಲಿ, ನೀನು ನಮ್ಮ ಮಗಳು. ಜೀವನ ಪರ್ಯಂತ ನೀನು ನಮ್ಮ ಮಗಳಾಗಿಯೇ ಇರ್ತೀಯಾ. ಬೇರೆ ಯಾರು ಏನು ಹೇಳಿದ್ರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದಿದ್ದರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಕೇರಳ ಸುಳ್ಳು ಪೋಕ್ಸೋ: 9ತಿಂಗ್ಳು ಜೈಲಿನಲ್ಲಿ ಕಳೆದ ವೃದ್ಧ, ಆಗಿದ್ದೇನು ಗೊತ್ತಾ

ರಮ್ಯಾ ಪೋಸ್ಟ್ ಗೆ ನೋ ಕಾಮೆಂಟ್ಸ್: ಸೈಲೆಂಟ್ ಆದ ಡಿಬಾಸ್ ಫ್ಯಾನ್ಸ್

ಮನುಷ್ಯರು ಬಣ್ಣ ಬದಲಾಯಿಸಿದರೇನು.. ದರ್ಶನ್ ಗೆ ಟಾಂಗ್ ಕೊಟ್ಟರಾ ಪವಿತ್ರಾ ಗೌಡ

ಮುಂದಿನ ಸುದ್ದಿ
Show comments