Select Your Language

Notifications

webdunia
webdunia
webdunia
webdunia

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್

Sampriya

ಮುಂಬೈ , ಶನಿವಾರ, 7 ಜೂನ್ 2025 (17:18 IST)
Photo Courtesy X
ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿ ಈಚೆಗೆ ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ಅವರನ್ನು ಭೇಟಿಯಾದರು. ಅವರ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿದೆ. 

ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅಮೀರ್‌ ಅವರ ಮನೆಯಲ್ಲಿ ಭೇಟಿ ನಡೆದಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು 'ಸೀತಾರೆ ಜಮೀನ್ ಪರ್' ಚಿತ್ರದ ವಿಶೇಷ ಪ್ರದರ್ಶನದ ನಂತರ ಇಬ್ಬರೂ ಭೇಟಿಯಾಗಿದ್ದಾರೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋದಲ್ಲಿ ಕೋಣೆಯೊಂದರಲ್ಲಿ ಆಟದಲ್ಲಿ ತೊಡಗಿದ್ದ ಅಮೀರ್ ಖಾನ್‌ಗೆ ಒಬ್ಬ ವ್ಯಕ್ತಿ ಸಚಿನ್‌ ಬಂದಿದ್ದಾರೆ ಎಂದು ಹೇಳುತ್ತಾನೆ. ಈ ವಿಷಯವನ್ನು ಕೇಳಿ ಅಮಿರ್‌ ಖಾನ್‌ ಬಾಗಿಲ ಬಳಿ ಓಡುತ್ತಾನೆ. ಸಚಿನ್‌ ಆಗಮನಕ್ಕೆ ಅಮೀರ್‌ ಖಾನ್‌ ಫುಲ್ ಶಾಕ್ ಆಗುತ್ತಾರೆ. ಈ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು