ದೀಪಿಕಾ ಹೇಳಿ ಕೇಳಿ ಕತ್ರಿನಾ ಮಾಜಿ ಪ್ರೇಮಿ ರಣಬೀರ್ ಕಪೂರ್ ನ ಮಾಜಿ ಗೆಳತಿ. ಹೀಗಾಗಿ ಆಕೆಯ ಜತೆಗೆ ಖಂಡಿತಾ ಅಭಿನಯಿಸಲಾರೆ ಎನ್ನುತ್ತಿದ್ದಾರೆ ಕತ್ರಿನಾ. ಹೀಗಾಗಿ ನಿರ್ದೇಶಕರಿಗೆ ಅವರನ್ನು ಬಿಟ್ಟು ಇನ್ಯಾರು ಎಂದು ತಲೆಕೆಡಿಸಿಕೊಂಡು ಕೂರುವ ಪರಿಸ್ಥಿತಿ.
ದೀಪಿಕಾ ಪಡುಕೋಣೆ ಜತೆ ಯಾವುದೇ ಕಾರಣಕ್ಕೂ ಅಭಿನಯಿಸುವುದಿಲ್ಲ. ಒಂದು ವೇಳೆ ತನ್ನ ಸಿನಿಮಾಗೆ ಆಕೆಯನ್ನು ಕರೆತಂದರೆ ನಾನೆ ಚಿತ್ರದಿಂದ ಹೊರ ನಡೆಯುತ್ತೇನೆ ಎಂದು ಕತ್ರಿನಾ ಕೈಫ್ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.
ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರದ ಖ್ಯಾತಿಯ ನಿರ್ದೇಶಕ ಆನಂದ್ ಎಲ್ ರೈ ಶಾರುಖ್ ಖಾನ್ ಜತೆ ಹೊಸ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಇದು ತ್ರಿಕೋನ ಪ್ರೇಮಕತೆಯಾಗಿದ್ದು, ಇಬ್ಬರು ಹೀರೋಯಿನ್ ಗಳ ಅಗತ್ಯವಿದೆ. ಹೀಗಾಗಿ ಕತ್ರಿನಾ ಕೈಫ್ ಸಂಪರ್ಕಿಸಿದ ನಿರ್ದೇಶಕರು ಇನ್ನೊಬ್ಬ ನಾಯಕಿಯ ಪಾತ್ರಕ್ಕೆ ದೀಪಿಕಾ ಅವರನ್ನು ಕರೆತರಲು ಯೋಜನೆ ಹಾಕಿದ್ದರಂತೆ.