Publish Date: Fri, 14 Jun 2024 (17:38 IST)
Updated Date: Fri, 14 Jun 2024 (17:42 IST)
ಬೆಂಗಳೂರು: ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುತ್ತಿದ್ದ ಕೆಲವು ಮಂದಿ ಇದೀಗ ಮಿಸ್ ಆಗುತಿದ್ದು, ಬೇಗ ಆನ್‌ಲೈನ್‌ಗೆ ಬನ್ನಿ ಎಂದು ದರ್ಶನ್ ಬಳಗದಲ್ಲಿ ಗುರುತಿಸಿಕೊಂಡಿರುವ ಕೆಲ ನಟರಿಗೆ ನಟ ಕಾರ್ತಿಕ್ ಜಯರಾಮ್ ಅವರು ಟಾಂಟ್ ನೀಡಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಕಾರ್ತಿಕ್ ಅವರು, ನೀವು ಅಂದುಕೊಳ್ಳುವುದಿಲ್ವ, ಸಡನ್ನಾಗಿ ಕೆಲವರು ಸಾಮಾಜಿಕ ಜಾಳತಾಣದಲ್ಲಿ ಮಿಸ್ ಆಗುತ್ತಿದ್ದಾರೆಂದು, ಪ್ಲೀಸ್ ಬನ್ನಿ ಎಂದು ದರ್ಶನ್ ಬಳಗದಲ್ಲಿ ಗುರುತಿಸಿಕೊಂಡಿರುವ ನಟರಿಗೆ ಅವರು ಟಾಂಟ್ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ಅವರ ಆಪ್ತರಾಗಿರುವ ಕಾರ್ತಿಕ್ ಜಯರಾಮ್ ಒಬ್ಬ ಭಾರತೀಯ ನಟ. ಇವರಿಗೆ ಕಲರ್ಸ್ ಕನ್ನಡದಲ್ಲಿ 2013ರಿಂದ 14ರ ವರೆಗೆ ಪ್ರಸಾರವಾಗಿದ್ದ ಅಶ್ವಿನಿ ನಕ್ಷತ್ರ ಧಾರವಾಹಿ ತುಂಬಾನೇ ಖ್ಯಾತಿ ತಂದುಕೊಟ್ಟಿತ್ತು. ಅಶ್ವಿನಿ ನಕ್ಷತ್ರದಲ್ಲಿ ಜೆ. ಕೃಷ್ಣ ಎಂಬ "ಸೂಪರ್‌ಸ್ಟಾರ್" ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಇದೇ ಸಮಯದಲ್ಲಿ ಇವರು ಹಲವು ಚಲನಚಿತ್ರಗಳಲ್ಲಿ ಸಹನಟರಾಗಿ ಕೂಡ ಕಾಣಿಸಿಕೊಂಡರು.