ಬೆಂಗಳೂರು: ಕಳೆದ 30 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ, ಬಿಗ್‌ಬಾಸ್ ಖ್ಯಾತಿಯ ಸಿರಿ ಅವರು ತಮ್ಮ 39 ನೇ ವಯಸ್ಸಿನಲ್ಲಿ ಇದೀಗ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಮಿಂಚಿದ್ದ ಸಿರಿ ಅವರಿಗೆ ಮದುವೆ ಆಗುವಂತೆ ಅವರ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಲ್ಲದೆ ಒಳ್ಳೆಯ ಹುಡುಗ ಸಿಕ್ಕರೆ ಮದುವೆಯಾಗುವುದಾಗಿ ಬಿಗ್‌ಬಾಸ್ ವೇದಿಕೆಯಲ್ಲೂ ಹೇಳಿಕೊಂಡಿದ್ದರು. ಇದಿಗ ಅದರಂತೆ ಉದ್ಯಮಿ ಪ್ರಭಾಕರ್ ಬೋರೆಗೌಡ ಅವರನ್ನು ಮದುವೆಯಾಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
40 ವರ್ಷವಾದರು ಸಿಂಗಲ್ ಆಗಿದ್ದ ಸಿರಿ ಅವರಲ್ಲಿ ಯಾಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆಗಳನ್ನು ಎಲ್ಲರು ಕೇಳುತ್ತಿದ್ದರು. ಇದೀಗ ಸಿರಿ ಅವರ ಮದುವೆ ಹಾಗೂ ಅರಿಶಿನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಉದ್ಯಮಿ ಪ್ರಭಾಕರ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಭಾಕರ್ ಅವರು ಮೂಲತಃ ಮಂಡ್ಯದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.