Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಟಿ ವಿಜಯಲಕ್ಷ್ಮಿ ವಿವಾದ ವಾಣಿಜ್ಯ ಮಂಡಳಿಯಲ್ಲಿ ಇತ್ಯರ್ಥ

webdunia
ಶುಕ್ರವಾರ, 1 ಅಕ್ಟೋಬರ್ 2021 (17:54 IST)
ಬೆಂಗಳೂರು: ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡಿರುವ ನಟಿ ವಿಜಯಲಕ್ಷ್ಮಿ ತಮಗೆ ಭಿಕ್ಷೆ ಎಂದು ತಿಳಿದು ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.


ಅದರಂತೆ ಹಲವರು ವಿಜಯಲಕ್ಷ್ಮಿ ಖಾತೆಗೆ ಹಣ ನೀಡಿದ್ದಾರೆ. ಇನ್ನು, ಇದರ ಬೆನ್ನಲ್ಲೇ ವಕೀಲ ಜಗದೀಶ್, ಚಿತ್ರರಂಗದವರ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಇದರಿಂದ ಸಿಟ್ಟಿಗೆದ್ದ ವಾಣಿಜ್ಯ ಮಂಡಳಿ ಸದಸ್ಯರು ಇಂದು ವಿಜಯಲಕ್ಷ್ಮಿ ಸಮ್ಮುಖದಲ್ಲೇ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ತಾಯಿ ನಿಧನರಾದ ಬಳಿಕ ನನಗೆ ಶಿವಣ್ಣ, ಪುನೀತ್, ಯಶ್ ಸೇರಿದಂತೆ ಎಲ್ಲರೂ ಫೋನ್ ಮಾಡಿದ್ದಾರೆ. ನಾನು ಅನಾಥೆ. ನನಗೆ ಈಗ ಚಿತ್ರರಂಗವೇ ಕುಟುಂಬ. ನನ್ನ ಬಗ್ಗೆ ಲಾಯರ್ ಜಗದೀಶ್ ಅವರು ನೀಡಿರುವ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಕ್ಷಮೆ ಕೋರಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ನೀನಾಸಂ ಸತೀಶ್ ಗೆ ತಾಯಿ ವಿಯೋಗ