Select Your Language

Notifications

webdunia
webdunia
webdunia
webdunia

ಸಿಸಿಎಲ್ ಸೆಮಿಫೈನಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್/ತೆಲುಗು ವಾರಿಯರ್ಸ್ ಮ್ಯಾಚ್

ಸಿಸಿಎಲ್ ಸೆಮಿಫೈನಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್/ತೆಲುಗು ವಾರಿಯರ್ಸ್ ಮ್ಯಾಚ್
ವಿಶಾಖಪಟ್ಟಣಂ , ಶುಕ್ರವಾರ, 24 ಮಾರ್ಚ್ 2023 (17:12 IST)
ವಿಶಾಖಪಟ್ಟಣಂ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಇಂದು ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಲಿದೆ.

ವಿಶಾಖಪಟ್ಟಣಂನಲ್ಲಿ ಪಂದ್ಯ ನಡೆಯುತ್ತಿದೆ. ಕಿಚ್ಚ ಸುದೀಪ್, ಪ್ರದೀಪ್ ಬೋಗಾದಿ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡುತ್ತಲೇ ಬಂದಿದೆ.

ತೆಲುಗು ವಾರಿಯರ್ಸ್ ಕೂಡಾ ಪ್ರಬಲ ತಂಡವಾಗಿದೆ. ಸೀಸನ್ 6 ರ ಚಾಂಪಿಯನ್ ತೆಲುಗು ವಾರಿಯರ್ಸ್ ಗೆ ಅಖಿಲ್ ಅಕ್ಕಿನೇನಿ ನಾಯಕ. ಸ್ವತಃ ಅವರೇ ಮುಂದೆ ನಿಂತು ಆಡುತ್ತಾರೆ. ಹೀಗಾಗಿ ಇಂದು ಜಿದ್ದಾಜಿದ್ದಿನ ಪಂದ್ಯ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದ್ದು, ಜೀ ಕನ್ನಡ ಸಿನಿಮಾದಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ಜನ್ಯಾ-ಶಿವರಾಜ್ ಕುಮಾರ್ ಸಿನಿಮಾಗೆ ಹೀರೋಯಿನ್ ಹುಡುಕಾಟ