Publish Date: Fri, 24 Mar 2023 (10:50 IST)
Updated Date: Fri, 24 Mar 2023 (11:01 IST)
ಮುಂಬೈ: ಈ ಬಾರಿಯ ಏಷ್ಯಾ ಕಪ್ ಕೂಟ ಪಾಕಿಸ್ತಾನದಲ್ಲೇ ನಡೆಯುವುದು ಖಚಿತವಾಗಿದೆ. ಭಾರತವೂ ಟೂರ್ನಿಯ ಭಾಗವಾಗಲಿದೆ.
ಪಾಕಿಸ್ತಾನದ ಜೊತೆಗೆ ಒಂದು ವಿದೇಶೀ ತಾಣದಲ್ಲಿ ಪಂದ್ಯ ನಡೆಯಲಿದೆ. ಭಾರತ ಆಡಲಿರುವ ಪಂದ್ಯಗಳು ವಿದೇಶಿ ತಾಣದಲ್ಲಿ ನಡೆಯಲಿದೆ.
ಇದರಿಂದಾಗಿ ಭಾರತವೂ ಏಷ್ಯಾ ಕಪ್ ತಪ್ಪಿಸಿದಂತಾಗುವುದಿಲ್ಲ. ಪಾಕಿಸ್ತಾನವೇ ಈ ಬಾರಿ ಏಷ್ಯಾ ಕಪ್ ಕ್ರಿಕೆಟ್ ಆಯೋಜಿಸುತ್ತಿದೆ. ಆದರೆ ಸಾಂಪ್ರದಾಯಿಕ ಎದುರಾಳಿ ದೇಶಕ್ಕೆ ಟೀಂ ಇಂಡಿಯಾ ಕಳುಹಿಸಲು ಭಾರತ ಸರ್ಕಾರದ ಒಪ್ಪಿಗೆ ಇಲ್ಲ.